ತನ್ನ ಮಾಲಿಕನನ್ನು ಗುರುತಿಸಲು ಸ್ವತಃ ಎಮ್ಮೆಗೆ ಜವಾಬ್ದಾರಿ: ಉತ್ತರ ಪ್ರದೇಶ ಪೊಲೀಸರ ವಿನೂತನ ವಿಧಾನ!

ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆ ಯಾರದ್ದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸರು ವಿನೂತನ ವಿಧಾನವವೊಂದನ್ನು ಅನುಸರಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆ ಯಾರದ್ದು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಪೊಲೀಸರು ವಿನೂತನ ವಿಧಾನವವೊಂದನ್ನು ಅನುಸರಿಸಿದ್ದಾರೆ. 

ಕನೌಜ್ ನಲ್ಲಿ ವಿರೇಂದ್ರ ಎಂಬುವವರು ತಮ್ಮ ಎಮ್ಮೆ ಕಳ್ಳತನವಾಗಿದೆ, ತಮ್ಮ ಸ್ನೇಹಿತ ತಮ್ಮ ಎಮ್ಮೆಯನ್ನು ಕಳ್ಳತನ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಮಾಧವ್ ಪುರದ ಧರ್ಮೇಂದ್ರ ವಿರುದ್ಧ ತಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಆದರೆ ಧರ್ಮೇಂದ್ರ ಹೇಳುವ ಪ್ರಕಾರ ಎಮ್ಮೆ ತಮ್ಮದೇ ಎಂದು ವಾದಿಸುತ್ತಿದ್ದರು. ಇದರಿಂದ ಬೇಸತ್ತ ಪೊಲೀಸರು ಎಮ್ಮೆ ಮಾಲಿಕ ಯಾರೆಂಬುದನ್ನು ಕಂಡುಹಿಡಿಯಲು ವಿನೂತನ ಮಾದರಿಯನ್ನು ಅನುಸರಿಸಿದ್ದಾರೆ. 

ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಕಾಂತ್ ಮಿಶ್ರಾ ಎಮ್ಮೆಯನ್ನು ಪೊಲೀಸ್ ಠಾಣೆಗೇ ಕರೆಸಿ, ಇಬ್ಬರೂ ವ್ಯಕ್ತಿಗಳಿಗೆ ಎಮ್ಮೆಯನ್ನು ತಮ್ಮ ಬಳಿ ಕರೆಯುವಂತೆ ಸೂಚಿಸದರು, ಎಮ್ಮೆ ಯಾರ ಬಳಿ ತೆರಳುತ್ತದೆಯೋ ಅವರೇ ಎಮ್ಮೆಯ ಮಾಲಿಕರೆಂದು ನಿರ್ಧರಿಸುವುದಾಗಿ ಪೊಲೀಸರು ತಿಳಿಸಿದ್ದರು. 

ಪೊಲೀಸರ ಸೂಚನೆಯಂತೆ ನಡೆದ ಪ್ರಕ್ರಿಯೆಯಲ್ಲಿ ಎಮ್ಮೆ ತನ್ನ ಮಾಲಿಕನನ್ನು ತಕ್ಷಣವೇ ಗುರುತಿಸಿದ್ದು, ಧರ್ಮೇಂದ್ರ ಕರೆದ ತಕ್ಷಣ ಆತನ ಬಳಿ ಹೋಗಿ ವಿರೇಂದ್ರ ಅವರನ್ನು ನಿರ್ಲಕ್ಷ್ಯಿಸಿತು. ಈ ಹಿನ್ನೆಲೆಯಲ್ಲಿ ಧರೇಂದ್ರ ಅವರಿಗೇ ಎಮ್ಮೆಯನ್ನು ವಾಪಸ್ ಕೊಟ್ಟು ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com