ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿಲ್ಲ: ಹೈಕೋರ್ಟ್ ಗೆ ಸಿಬಿಐ 

ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ ಎಂದು ಕೇಂದ್ರಿಯ ತನಿಖಾ ತಂಡ ಸಿಬಿಐ, ಬಾಂಬೆ ಹೈಕೋರ್ಟ್ ಗೆ ತಿಳಿಸಿದೆ.
ಸುಶಾಂತ್ ಸಿಂಗ್
ಸುಶಾಂತ್ ಸಿಂಗ್

ಮುಂಬೈ: ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ ಎಂದು ಕೇಂದ್ರಿಯ ತನಿಖಾ ತಂಡ ಸಿಬಿಐ, ಬಾಂಬೆ ಹೈಕೋರ್ಟ್ ಗೆ ತಿಳಿಸಿದೆ.

ಈ ಪ್ರಕರಣದಲ್ಲಿ ಮಾಧ್ಯಮಗಳ ಪ್ರಾಯೋಗಿಕತೆ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ವಿಚಾರಣೆ ವೇಳೆ, ಮಾಧ್ಯಮವು ಧ್ರುವೀಕರಣಗೊಂಡಿದೆ.  ಇದು ನಿಯಂತ್ರಣದ ಪ್ರಶ್ನೆಯಲ್ಲ, ಆದರೆ, ಪರಿಶೀಲನೆ ಮತ್ತು ಸಮತೋಲನವಾಗಿದೆ ಎಂದು ನ್ಯಾಯಾಲಯ ಹೇಳಿತು.

ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಇಡಿ ಮತ್ತು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಕೂಡಾ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಎಂದು ಹೇಳಿದರು.

ತನಿಖೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಎಂದು ಎಲ್ಲಾ ಮೂರು ಕೇಂದ್ರಿಯಾ ಏಜೆನ್ಸಿಗಳು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿವೆ. ನಮ್ಮ ಹೊಣೆಗಾರಿಕೆ ಗೊತ್ತಿದೆ. ಯಾವುದೇ ಏಜೆನ್ಸಿಯಿಂದ ಮಾಹಿತಿ ಸೋರಿಕೆಯ ಪ್ರಶ್ನೆಯೇ ಇಲ್ಲ ಎಂದು ಎಎಸ್ ಜಿ ತಿಳಿಸಿದರು.

ಟಿವಿ ಸುದ್ದಿಯಲ್ಲಿನ ಅಂಶಗಳ ನಿಯಂತ್ರಣಕ್ಕೆ ಶಾಸನ ರಚನೆ ಅಗತ್ಯವಿದೆಯೇ ಎಂಬುದರ ಬಗ್ಗೆಯೂ ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com