ಭಾರತ ಸೇನಾ ಮುಖ್ಯಸ್ಥ ನೇಪಾಳಕ್ಕೆ ಭೇಟಿ: ಉಭಯರಾಷ್ಟ್ರಗಳ ಸಂಬಂಧ ಸುಧಾರಣೆಗೆ ಒತ್ತು

ನವೆಂಬರ್ 4ರಿಂದ ಸೇನಾ ಮುಖ್ಯಸ್ಥ  ಜನರಲ್ ಎಂ.ಎಂ.ನಾರವಾನೆ ಅವರ ಮೂರು ದಿನಗಳ  ನಿರ್ಣಾಯಕ ನೇಪಾಳ  ಭೇಟಿಯು ಭಾರತದೊಂದಿಗಿನ ಹಿಮಾಲಯ ತಪ್ಪಲಿನ ರಾಷ್ಟ್ರದ ಸಂಬಂಧವನ್ನು ಸುಧಾರಿಸಲು ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. .
ಎಂ ಎಂ ನಾರವಾನೆ
ಎಂ ಎಂ ನಾರವಾನೆ
Updated on

ನವದೆಹಲಿ: ನವೆಂಬರ್ 4ರಿಂದ ಸೇನಾ ಮುಖ್ಯಸ್ಥ  ಜನರಲ್ ಎಂ.ಎಂ.ನಾರವಾನೆ ಅವರ ಮೂರು ದಿನಗಳ  ನಿರ್ಣಾಯಕ ನೇಪಾಳ  ಭೇಟಿಯು ಭಾರತದೊಂದಿಗಿನ ಹಿಮಾಲಯ ತಪ್ಪಲಿನ ರಾಷ್ಟ್ರದ ಸಂಬಂಧವನ್ನು ಸುಧಾರಿಸಲು ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. .

ಸೇನಾ ಮುಖ್ಯಸ್ಥನೇಪಾಳದ ದ ಜನರಲ್ ಪೂರ್ಣ ಚಂದ್ರ ಥಾಪಾ ಸೇರಿದಂತೆ ಹಲವು ಉನ್ನತ ನಾಗರಿಕ ಮತ್ತು ಮಿಲಿಟರಿ ವಿಭಾಗದ ಅಧಿಕಾರಿಗಳು, ನಾಯಕರೊಂದಿಗೆ ಪ್ರಮುಖ ವಿಷಯಗಳ ಕುರಿತು ವ್ಯಾಪಕ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. 

"ರಕ್ಷಣಾ ಮತ್ತು ಭದ್ರತಾ ಕ್ಷೇತ್ರಗಳು ಸೇರಿದಂತೆ ಒಟ್ಟಾರೆ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಸೇನಾ ಮುಖ್ಯಸ್ಥರು ನವೆಂಬರ್ 4ರಿಂದ 6ರವರೆಗೆ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ" ಎಂದು ಉನ್ನತಸರ್ಕಾರಿ ಮೂಲವು ಪಿಟಿಐಗೆ ತಿಳಿಸಿದೆ.

1950 ರಲ್ಲಿ ಪ್ರಾರಂಭವಾದಸಂಪ್ರದಾಯದ ಮುಂದುವರಿಕೆಯಲ್ಲಿ, ಜನರಲ್ ನಾರವಾನೆ ಅವರಿಗೆ ಕಠ್ಮಂಡುವಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ನೇಪಾಳದ ಅಧ್ಯಕ್ಷ ಬಿಡ್ಯಾ ದೇವಿ ಭಂಡಾರಿ ಅವರು 'ನೇಪಾಳ ಸೇನೆಯ ಜನರಲ್' ಗೌರವ ಶ್ರೇಣಿಯನ್ನು ನೀಡಲಿದ್ದಾರೆ. ಭಾರತವು 'ಜನರಲ್ ಆಫ್ ಇಂಡಿಯನ್ ಆರ್ಮಿ' ಗೌರವ ಶ್ರೇಣಿಯನ್ನು ನೇಪಾಳ ಸೇನಾ ಮುಖ್ಯಸ್ಥರಿಗೆ ನೀಡುತ್ತದೆ.

ಹಿಮಾಲಯ ತಪ್ಪಲಲ್ಲಿರುವ ರಾಷ್ಟ್ರ ನೇಪಾಳ ಮೇ ತಿಂಗಳಲ್ಲಿ ಹೊಸ ರಾಜಕೀಯ ನಕ್ಷೆ ಬಿಡುಗಡೆಗೊಳಿಸಿದ ನಂತರ ಭಾರತದ ಉನ್ನತ ನಾಯಕರೊಬ್ಬರು ನೇಪಾಳಕ್ಕೆ ನೀಡುತ್ತಿರುವ ಮೊದಲ ಭೇಟಿ  ಇದಾಗಿದೆ.

ಸಂಬಂಧಗಳನ್ನು ಮರುಹೊಂದಿಸಲು ಸೇನಾ ಮುಖ್ಯಸ್ಥರನ್ನು ನೇಪಾಳಕ್ಕೆ ಕಳುಹಿಸುವ ಭಾರತದ ನಿರ್ಧಾರವು ನವದೆಹಲಿ ಮ್ಯಾನ್ಮಾರ್, ಮಾಲ್ಡೀವ್ಸ್, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್ ಮತ್ತು ಅಫ್ಘಾನಿಸ್ತಾನಗಳೊಂದಿಗಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ದೊಡ್ಡ ಬೆಳವಣಿಗೆಯ ಭಾಗವಾಗಿ ಕಂಡುಬರುತ್ತದೆ. ಈ ಮೂಲಕ ಚೀನಾ ನೇಪಾಳ ಸೇರಿ ಭಾರತದ ನೆರೆರಾಷ್ಟ್ರಗಳೊಂದಿಗೆ ನಡೆಸುತ್ತಿರುವ ಪಿತೂರಿಯನ್ನು ಮುರಿಯುವುದು ಭಾರತದ ಉದ್ದೇಶವಾಗಿದೆ.

ಈ ತಿಂಗಳ ಆರಂಭದಲ್ಲಿ, ಜನರಲ್ ನಾರವಾನೆ ಅವರು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಅವರೊಂದಿಗೆ ಮ್ಯಾನ್ಮಾರ್‌ಗೆ ಪ್ರಯಾಣ ಬೆಳೆಸಿದರು, ಈ ಸಂದರ್ಭದಲ್ಲಿ ಭಾರತವು ಮ್ಯಾನ್ಮರೀಸ್ ನೌಕಾಪಡೆಗೆ ಆಕ್ರಮಣ ಜಲಾಂತರ್ಗಾಮಿ ನೌಕೆಯನ್ನು ಪೂರೈಸಲು ತೀರ್ಮಾನಿಸಿದೆ. ಮಿಲಿಟರಿ ಮತ್ತು ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಲು ಒಪ್ಪಿಕೊಂಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com