ನಾಗರಿಕರು ಸರ್ಕಾರದ ಯೋಜನೆಗಳ ಫಲಾನುಭವಿಗಳು ಮಾತ್ರವಲ್ಲ, ನಿಜವಾದ ಪ್ರೇರಕ ಶಕ್ತಿಗಳು: ಪ್ರಧಾನಿ ಮೋದಿ

2022ರಿಂದ ಮುಂದಿನ 25 ವರ್ಷಗಳು ದೇಶದ ಬೆಳವಣಿಗೆ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ನಿಮಗೆ ಬಹಳ ದೊಡ್ಡ ಜವಾಬ್ದಾರಿಯಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವ ಸಂದರ್ಭದಲ್ಲಿ ದೇಶದ ಸೇವೆಯಲ್ಲಿರುವವರು ನೀವುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸಿವಿಲ್ ಸರ್ವಿಸ್ ಪ್ರೊಬೆಷನರಿಗಳನ್ನುದ್ದೇಶಿಸಿ ಮಾತನಾಡಿದರು.
ಸಿವಿಲ್ ಸರ್ವಿಸ್ ಪ್ರೊಬೆಷನರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ಸಿವಿಲ್ ಸರ್ವಿಸ್ ಪ್ರೊಬೆಷನರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ

ಗುಜರಾತ್: 2022ರಿಂದ ಮುಂದಿನ 25 ವರ್ಷಗಳು ದೇಶದ ಬೆಳವಣಿಗೆ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ನಿಮಗೆ ಬಹಳ ದೊಡ್ಡ ಜವಾಬ್ದಾರಿಯಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವ ಸಂದರ್ಭದಲ್ಲಿ ದೇಶದ ಸೇವೆಯಲ್ಲಿರುವವರು ನೀವುಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸಿವಿಲ್ ಸರ್ವಿಸ್ ಪ್ರೊಬೆಷನರಿಗಳನ್ನುದ್ದೇಶಿಸಿ ಮಾತನಾಡಿದರು.

ಇಂದು ಕೇಂದ್ರ ನಾಗರಿಕ ಸೇವಾ ಪ್ರೊಬೆಷನರಿಗಳನ್ನುದ್ದೇಶಿಸಿ ವರ್ಚುವಲ್ ಸಂವಾದ ನಡೆಸಿದ ಅವರು, ಸಾರ್ವಜನಿಕರು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಫಲಾನುಭವಿಗಳು ಮಾತ್ರವಲ್ಲದೆ ಅವರೇ ನಿಜವಾದ ಪ್ರೇರಕ ಶಕ್ತಿ. ಆದುದರಿಂದ ನಾವು ಸರ್ಕಾರದಿಂದ ಆಡಳಿತದ ಕಡೆಗೆ ಮುನ್ನಡೆಯಬೇಕು ಎಂದು ಪ್ರೊಬೆಷನರಿಗಳಿಗೆ ಕಿವಿಮಾತು ಹೇಳಿದರು.

ನಿಮ್ಮ ಬ್ಯಾಚು ಬಹಳ ಮುಖ್ಯವಾಗಿದೆ. ನಿಮ್ಮ ತಂಡ ಸರ್ಕಾರದ ಕೆಲಸಕ್ಕೆ ಇಳಿಯುವ ಹೊತ್ತಿಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತವೆ. ನಿಮ್ಮದೇ ತಂಡ ದೇಶಕ್ಕೆ 100ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ಆಚರಿಸುವಾಗ ದೇಶಸೇವೆಯಲ್ಲಿರುತ್ತದೆ. ಈ 25 ವರ್ಷಗಳು ಭಾರತದ ಪಾಲಿಗೆ ಅತ್ಯಂತ ಮುಖ್ಯವಾಗಿದೆ. ಪ್ರಮುಖ ಆಡಳಿತಾತ್ಮಕ ಸ್ಥಾಪನೆಗಳಿಗೆ ನಿಮ್ಮ ತಲೆಮಾರು ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಮಾತುಗಳನ್ನು ನೆನಪು ಮಾಡಿಕೊಂಡ ಪ್ರಧಾನಿ, 1947ರಲ್ಲಿ ಮೊದಲ ಬ್ಯಾಚ್ ನ ಸಿವಿಲ್ ಸರ್ವಿಸ್ ಅಧಿಕಾರಿಗಳಿಗೆ ಅವರು ನೀಡಿದ್ದ ಕಿವಿಮಾತುಗಳನ್ನು ನೆನಪು ಮಾಡಿಕೊಂಡರು.

ಒಂದರ್ಥದಲ್ಲಿ ದೇಶದ ನಾಗರಿಕ ಸೇವೆಗಳಿಗೆ ಸರ್ದಾರ್ ಪಟೇಲರು ಪಿತಾಮಹ ಎಂದರೆ ತಪ್ಪಾಗಲಾರದು. ಏಪ್ರಿಲ್ 21, 1947ರಲ್ಲಿ ಮೊದಲ ಬ್ಯಾಚ್ ನ ಆಡಳಿತಾತ್ಮಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಪಟೇಲರು, ನಾಗರಿಕ ಸೇವೆಯಲ್ಲಿರುವವರನ್ನು ದೇಶದ ಸ್ಟೀಲ್ ಫ್ರೇಮ್ ಗಳೆಂದು ಕರೆದಿದ್ದರು. ಜನರ ಸೇವೆ ಮಾಡುವುದು ನಾಗರಿಕ ಸೇವೆಯಲ್ಲಿರುವವರ ಮೊದಲ ಆದ್ಯತೆಯಾಗಬೇಕು. ಪಟೇಲರು ಹೇಳಿದ್ದನ್ನೇ ನಾನು ಕೂಡ ಹೇಳುತ್ತಿದ್ದು, ನಾಗರಿಕ ಸೇವೆಯಲ್ಲಿರುವವರು ದೇಶದ ಹಿತಾಸಕ್ತಿಗೋಸ್ಕರ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com