ಕೋಲ್ಕತ್ತಾ: ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರು

ಕೋವಿಡ್-19 ನಿಂದಾಗಿ ಸತತ ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರಾಗಿದೆ. 
ಕೋಲ್ಕತ್ತಾ: ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರು
ಕೋಲ್ಕತ್ತಾ: ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರು

ಕೋಲ್ಕತ್ತಾ: ಕೋವಿಡ್-19 ನಿಂದಾಗಿ ಸತತ ಒಂದು ವಾರಗಳ ಕಾಲ ವೆಂಟಿಲೇಟರ್ ನಲ್ಲಿದ್ದ ನವಜಾತ ಶಿಶು ಕೋವಿಡ್-19 ನಿಂದ ಪಾರಾಗಿದೆ. 

ಕೋಲ್ಕತ್ತಾದ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಸೆಂಟ್ರಲ್ ಕೋಲ್ಕತ್ತಾದ ರಿಪೋನ್ ಸ್ಟ್ರೀಟ್ ಏರಿಯಾದ ದಂಪತಿಗೆ ಜನಿಸಿದ್ದ ಗಂಡುಮಗುವಿಗೆ ಜನಿಸಿದ ಕೆಲವೇ ದಿನಗಳಲ್ಲಿ ಕೋವಿಡ್-19 ಪಾಸಿಟೀವ್ ವರದಿ ಬಂದಿತ್ತು.

ಜ್ವರ, ಉಸಿರಾಟದ ತೊಂದರೆಯಿಂದ ಆ.17 ರಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಯಲ್ಲಿ ಮಗುವಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಎರಡೂ ಶ್ವಾಸಕೋಶ ಸೋಂಕಿಗೆ ಗುರಿಯಾಗಿದ್ದ ಹಿನ್ನೆಲೆಯಲ್ಲಿ ವಯಸ್ಕರಿಗೆ ಮಾಡಲಾಗಿರುವ ಔಷಧಗಳನ್ನು ನೀಡಲಾಯಿತು. ಈ ಬಳಿಕ ಮಗು ಚಿಕಿತ್ಸೆಗೆ ಸ್ಪಂದಿಸಿ ಚೇತರಿಕೆ ಕಂಡಿತು ಎಂದು ವೈದ್ಯರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com