ಘೋರ ದುರಂತ: ಲಿಫ್ಟ್ ಕೆಳಗೆ ಸಿಲುಕಿ ಮೃತಪಟ್ಟ ಖ್ಯಾತ ಉದ್ಯಮಿ, ಕೂದಲೆಳೆ ಅಂತರದಲ್ಲಿ ಪುತ್ರಿ ಪಾರು!

ಲಿಫ್ಟ್ ಬರುವುದಕ್ಕೂ ಮುನ್ನ ಒಳಹೊಕ್ಕ ಖ್ಯಾತ ಉದ್ಯಮಿಯೊಬ್ಬರು ಲಿಫ್ಟ್ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ. 
ವಿಶಾಲ್ ಮೇವಾನಿ
ವಿಶಾಲ್ ಮೇವಾನಿ
Updated on: 

ಮುಂಬೈ: ಲಿಫ್ಟ್ ಬರುವುದಕ್ಕೂ ಮುನ್ನ ಒಳಹೊಕ್ಕ ಖ್ಯಾತ ಉದ್ಯಮಿಯೊಬ್ಬರು ಲಿಫ್ಟ್ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿರುವ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ. 

ಮುಂಬೈನ ರಿಟೇಲ್ ಚೈನ್ ಕೊಹಿನೂರು ಎಲೆಕ್ಟ್ರಾನಿಕ್ಸ್ ನಿರ್ದೇಶಕ 46 ವರ್ಷದ ವಿಶಾಲ್ ಮೇವಾನಿ ಮೃತ ದುರ್ದೈವಿ. ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. 

ವಿಶಾಲ್ ಅವರು ತಮ್ಮ ಪುತ್ರಿ ರೇಷ್ಮಾ ಜೊತೆ ಮುಂಬೈನ ವರ್ಲಿಗೆ ಬಂದಿದ್ದರು. ಈ ವೇಳೆ ಗೆಳೆಯನನ್ನು ಭೇಟಿ ಮಾಡುವ ಸಲುವಾಗಿ ಎರಡನೇ ಮಹಡಿಗೆ ಹೋಗಲು ಲಿಫ್ಟ್ ಬಟನ್ ಒಪ್ಪಿದ್ದಾರೆ. ಆದರೆ ಲಿಫ್ಟ್ ಬರುವುದಕ್ಕೂ ಮುನ್ನ ಡೋರ್ ಓಪನ್ ಆಗಿದ್ದರಿಂದ ಅವರು ಒಳ ಹೋಗಿದ್ದಾರೆ. 

ಈ ವೇಳೆ ಮೇಲಿಂದ ಲಿಫ್ಟ್ ಬರುತ್ತಿರುವುದನ್ನು ಕಂಡ ವಿಶಾಲ್ ಹೊರಬರಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಲಿಫ್ಟ್ ಕೆಳಗೆ ಸಿಲುಕಿ ಅಪ್ಪಿಚ್ಚಿಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಬದುಕುಳಿಯಲಿಲ್ಲ. ಆದರೆ ಪುತ್ರಿ ರೇಷ್ಮಾ ಮಾತ್ರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com