

ಬೆಂಗಳೂರು: ತಮಿಳುನಾಡು ಮೂಲದ ಖಾಸಗಿ ಬಸ್ ಒಂದು ವಿಶಾಖಪಟ್ಟಣದ ಪೆನುಗೊಳ್ಳು ಬಳಿ ವರಹಾ ನದಿಗೆ ಉರುಳಿ ಬಿದ್ದಿದೆ.
ವಿಶಾಖಪಟ್ಟಣಂ ನಿಂದ ಬಸ್ ಚೆನ್ನೈಗೆ ತೆರಳುತ್ತಿತ್ತು, ಘಟನೆ ಸಂಭವಿಸಿದಾಗ ಕೇವಲ ಮೂರು ಜನ ಮಾತ್ರ ಬಸ್ ನಲ್ಲಿದ್ದರು. 30 ಅಡಿ ಮೇಲಿಂದ ಬಸ್ ಉರುಳಿ ಬಿದ್ದಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ಸುಮಾರು 2 ಗಂಟೆಗಳ ನಂತರ ಬಸ್ ನಲ್ಲಿದ್ದ ಮೂವರನ್ನು ರಕ್ಷಿಸಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಬಸ್ ನದಿಗೆ ಉರುಳಿ ಬಿದ್ದಿದೆ, ಗಾಯಗೊಂಡವರನ್ನು ನಕ್ಕಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.