ಮನಬಂದಂತೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರನನ್ನು ಸದೆಬಡಿದ ಸೇನಾಪಡೆ!

ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರನೋರ್ವನನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಶ್ರೀನಗರ: ಮಧ್ಯ ಕಾಶ್ಮೀರದ ಬುದ್ಗಾಮ್‍ನಲ್ಲಿ ಭದ್ರತಾಪಡೆಗಳೊಂದಿಗೆ ನಡೆದಿದ್ದ ಗುಂಡಿನಚಕಿಯಲ್ಲಿ ಗಾಯಗೊಂಡು ಹೊಂಡಕ್ಕೆ ಜಿಗಿದಿದ್ದ ಉಗ್ರನ ಮೃತದೇಹವನ್ನು ನಾಲ್ಕುದಿನ ಕಾರ್ಯಾಚರಣೆ ನಂತರ ಹೊರಕ್ಕೆ ತೆಗೆಯಲಾಗಿದೆ ಎಂದು ರಕ್ಷಣಾ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.

ಸೆ 7 ರಂದು ಬೆಳಿಗ್ಗೆ ಬಡ್ಗಾಮ್‍ನ ಕವೂಸಾ ಖ್ಲಿಸಾದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ಚಕಮಕಿಯಿಂದ ಉಗ್ರನೊಬ್ಬ ಗಾಯಗೊಂಡಿದ್ದು, ಬಳಿಕ ಅವನು ಹತ್ತಿರದ ಹೊಂಡಕ್ಕೆ ಹಾರಿದ್ದ ಎಂದು ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.

ಹೊಂಡದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ತರಬೇತಿ ಪಡೆದ ಈಜು ತಜ್ಞರು ಸಹ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ನಾಲ್ಕು ದಿನಗಳ ಶೋಧದ ನಂತರ ಶುಕ್ರವಾರ ಬೆಳಿಗ್ಗೆ ಉಗ್ರನ ಮೃತದೇಹವನ್ನು ಹೊಂಡದಿಂದ ಹೊರತೆಗೆಯಲಾಗಿದೆ. ಇದರೊಂದಿಗೆ ಕಾರ್ಯಾಚರಣೆ ಮುಗಿದಿದೆ ಎಂದು ಕರ್ನಲ್ ಕಾಲಿಯಾ ತಿಳಿಸಿದ್ದಾರೆ.

ಇದರೊಂದಿಗೆ ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಭದ್ರತಾ ಪಡೆಗಳು ಒಟ್ಟು ನಾಲ್ವರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಹತ್ಯೆ ಮಾಡಿದೆ. 

ಹತ್ಯೆಯಾದ ಉಗ್ರರನ್ನು ಶಕೀಲ್ ಅಹ್ಮದ್ ವಾನಿ, ಶೋಕತ್ ಅಹ್ಮದ್, ಅಕಿಬ್ ಮಕ್ಬೂಲ್ ಖಾನ್, ಮತ್ತು ಅಜಾಜ್ ಅಹ್ಮದ್ ದಾರ್ ಎಂದು ಗುರ್ತಿಸಲಾಗಿದೆ. 

ಕುಪ್ವಾರದಲ್ಲಿ 2 ಜೆಇಎಂ ಉಗ್ರರ ಬಂಧಿಸಿದ ಸೇನಾಪಡೆ
ಈ ನಡುವೆ ಕುಪ್ವಾರ ಜಿಲ್ಲೆಯ ಡ್ರುಗ್ಮುಲ್ಲಾ ಎಂಬ ಪ್ರದೇಶದಲ್ಲಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿದೆ. 

ಬಂಧನಕ್ಕೊಳಗಾಗಿರುವ ಇಬ್ಬರು ಉಗ್ರರು ಕಾರಿನಲ್ಲಿ ತೆರಳಲುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಭದ್ರತಾಪಡೆಗಳು ಚೆಕ್ ಪೋಸ್ಟ್ ಬಳಿ ವಾಹನವನ್ನು ತಡೆಹಿಡಿದು ಪರಿಶೀಲನೆ ನಡೆಸಿದ್ದಾರೆ. ಇದರಂತೆ ಉಗ್ರರಿಬ್ಬರನ್ನು ಬಂಧಿಸಿಸಿದ್ದಾರೆಂದು ತಿಳಿದುಬಂದಿದೆ. 

ಬಂಧನಕ್ಕೊಳಗಾಗಿರುವ ಉಗ್ರರಿಂದ ಭದ್ರತಾ ಪಡೆಗಳು 1 ಎಕೆ 47, ಸ್ಫೋಟಕ ವಸ್ತುಗಳು, 2 ಗ್ರೆನೇಡ್ ಗಳು, 7 ಲಕ್ಷ ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com