ಕೋವಿಡ್-19 ಅನ್ಲಾಕ್: ದೆಹಲಿಯಲ್ಲಿ 5 ತಿಂಗಳ ಬಳಿಕ ತೆರೆದ ಯೋಗ ಕೇಂದ್ರಗಳು, ಜಿಮ್ ಗಳು

ಕೊರಾನಾ ವೈರಸ್ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಜಿಮ್ ಗಳು ಮತ್ತು ಯೋಗ ಕೇಂದ್ರಗಳನ್ನು ಇಂದಿನಿಂದ ಪುನಾರಂಭ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಜಿಮ್ ಪುನಾರಂಭ (ಸಂಗ್ರಹ ಚಿತ್ರ)
ಜಿಮ್ ಪುನಾರಂಭ (ಸಂಗ್ರಹ ಚಿತ್ರ)

ನವದೆಹಲಿ: ಕೊರಾನಾ ವೈರಸ್ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಜಿಮ್ ಗಳು ಮತ್ತು ಯೋಗ ಕೇಂದ್ರಗಳನ್ನು ಇಂದಿನಿಂದ ಪುನಾರಂಭ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಕೊವಿಡ್ ಸೋಂಕಿನಿಂದಾಗಿ ಮುಚ್ಚಲ್ಪಟ್ಟಿದ್ದ ಜಿಮ್ ಗಳು ಮತ್ತು ಯೋಗ ಕೇಂದ್ರಗಳನ್ನು ಆನ್ಲಾಕ್ 3.0 ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಮತೆ ಪುನಾರಂಭ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ. ಆದರೆ, ದೆಹಲಿಯ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ. ಕಂಟೈನ್ ಮೆಂಟ್ ಝೋನ್  ಗಳಲ್ಲಿ ನಿರ್ಬಂಧ ಅಥವಾ ಎಸ್ಒಪಿ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದಲ್ಲದೆ ದೆಹಲಿಯ ಎಲ್ಲ  ಮುನ್ಸಿಪಲ್ ಕಾರ್ಪೋರೇಷನ್ ಗಳಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಮಾರುಕಟ್ಟೆ ತೆರೆಯಲು ಅನುಮತಿ ನೀಡಲಾಗಿದೆ. ಕಂಟೈನ್ ಮೆಂಟ್ ಝೋನ್ ಗಳಲ್ಲಿ ಎಂದಿನಂತೆ ನಿರ್ಬಂಧಗಳು ಮುಂದುವರೆಯಲಿದೆ. ಸೆಪ್ಟೆಂಬರ್ 14 ರಿಂದ 30 ರವರೆಗೂ ಈ ನಿಯಮ ಚಾಲನೆಯಲ್ಲಿರಲಿದೆ. 

ಸೆಪ್ಟೆಂಬರ್ 10 ರಿಂದ, ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಅನ್ಲಾಕ್ 4 ರ ಭಾಗವಾಗಿ ರೆಡ್ ಲೈನ್, ಗ್ರೀನ್ ಲೈನ್ ಮತ್ತು ವೈಲೆಟ್ ಲೈನ್ ನಲ್ಲಿ ಮೆಟ್ರೋ ಸೇವೆಗಳನ್ನು ಪುನರಾರಂಭಿಸಿದೆ.

ಪ್ರಸ್ತುತ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,18,304ಕ್ಕೆ ಏರಿಕೆಯಾಗಿದ್ದು, 4,744 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ 1,84,748 ಗುಣಮುಖರಾಗಿದ್ದು, 28,812 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com