ಲೇಹ್: ಎಲ್ಎಸಿಯಲ್ಲಿ ಘರ್ಷಣೆಗಳ ನಡುವೆಯೇ ಲಡಾಖ್ ಮರಗಟ್ಟುವ ಚಳಿಯನ್ನು ಎದುರಿಸಲು ಸೇನಾಪಡೆ ಸಿದ್ಧಗೊಂಡಿದೆ.
ತಾಪಮಾನ ಹೆಚ್ಚಿಸುವ ವಸ್ತುಗಳು, ಇಂಧನ, ಬಟ್ಟೆಗಳು ಸೇರಿದಂತೆ ಸೇನಾಪಡೆಗೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳೂ ತಲುಪಿದೆ.
ಲಡಾಖ್ ನಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಗೆ ಹೋಗಲಿದ್ದು, ಚಳಿಗಾಲದ ಅವಧಿಯಲ್ಲಿ ದೇಶದ ಬೇರೆ ಭಾಗಗಳೊಂದಿಗೆ ಈ ಪ್ರದೇಶಗಳು ಬಹುತೇಕ ಸಂಪರ್ಕವನ್ನೇ ಕಳೆದುಕೊಳ್ಳುವುದಂತಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲೇ ಚೀನಾ-ಭಾರತ ಗಡಿ ಘರ್ಷಣೆಯೂ ತಲೆದೋರಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಶಸ್ತ್ರಾಸ್ತ್ರ, ಇಂಧನ ಆಹಾರ ಪದಾರ್ಥಗಳ ದಾಸ್ತಾನು ಮಾಡಿಕೊಳ್ಳಲಾಗಿದೆ.
Advertisement