ಉತ್ತರ ಪ್ರದೇಶ: ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ಪಾಪಿ ಪತಿ 

ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ದುಷ್ಟ ಪತಿಯೋರ್ವ ತನ್ನ ಪತ್ನಿಯ ಗರ್ಭವನ್ನೇ ಸೀಳಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಲಖನೌ: ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ದುಷ್ಟ ಪತಿಯೋರ್ವ ತನ್ನ ಪತ್ನಿಯ ಗರ್ಭವನ್ನೇ ಸೀಳಿರುವ ಪೈಶಾಚಿಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬುಡಾನ್​ ಜಿಲ್ಲೆಯ ನೇಕ್​ಪುರ್ ನಲ್ಲಿ ಈ ಘಟನೆ ನಡೆದಿದ್ದು, ಗಂಡು ಮಗು ಬೇಕು ಎಂದು ಪರಿತಪಿಸುತ್ತಿದ್ದ ವ್ಯಕ್ತಿಯೋರ್ವ ತನ್ನ ಪತ್ನಿಗೆ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಪತ್ನಿಯ ಗರ್ಭವನ್ನೇ ಚಾಕುವಿನಿಂದ ಸೀಳಿದ್ದಾನೆ. ನೇಕ್​ಪುರ್ ನಿವಾಸಿ ಪನ್ನಾಲಾಲ್ ಎಂಬಾತ ಈ ಕೃತ್ಯವೆಸಗಿದ್ದು,  ಪ್ರಸ್ತುತ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪನ್ನಲಾಲ್ ಮತ್ತು ಅತನ ಪತ್ನಿಗೆ ಈ ಹಿಂದೆ 5 ಹೆಣ್ಣಮಕ್ಕಳು ಜನಿಸಿದ್ದು, ದಂಪತಿ ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಹಿಂದೆ ಸತತ 5 ಹೆಣ್ಣು ಮಕ್ಕಳಾದ್ದರಿಂದ ರೋಸಿ ಹೋಗಿದ್ದ ಪನ್ನಲಾಲ್ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಇಚ್ಛಿಸಿದ್ದ. ಹೀಗಾಗಿ ತನ್ನ 35 ವರ್ಷದ 7 ತಿಂಗಳ ಗರ್ಭಿಣಿ ಹೊಟ್ಟೆಯನ್ನು  ಚೂಪಾದ ಸಾಧನದಿಂದ ಸೀಳಿದ್ದಾನೆ. ತೀವ್ರ ರಕ್ತ ಸ್ರಾವದಲ್ಲಿ ಸಾವು-ನೋವು ನಡುವೆ ಒದ್ದಾಡುತ್ತಿದ್ದ ಮಹಿಳೆಯನ್ನು ಬರೇಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪನ್ನಾಲಾಲ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com