ದೆಹಲಿ ಗಲಭೆ: ಫೇಸ್‌ಬುಕ್‌ ವಿರುದ್ಧ ಅ.15ರವರೆಗೆ ಒತ್ತಾಯದ ಕ್ರಮ ಕೈಗೊಳ್ಳದಂತೆ 'ಸುಪ್ರೀಂ' ನಿರ್ದೇಶನ

ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್‌ಗೆ ಪ್ರತಿಕ್ರಿಯಿಸದ ಫೇಸ್‌ಬುಕ್‌ ಭಾರತದ ಉಪಾಧ್ಯಕ್ಷರ ವಿರುದ್ದ ಅ.15ರವರೆಗೆ ಯಾವುದೇ ಒತ್ತಾಯದ ಕ್ರಮ ಕೈಗೊಳ್ಳದಂತೆ ದೆಹಲಿ ವಿಧಾನಸಭೆಗೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.
ಅಜಿತ್ ಮೋಹನ್
ಅಜಿತ್ ಮೋಹನ್

ನವದೆಹಲಿ: ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್‌ಗೆ ಪ್ರತಿಕ್ರಿಯಿಸದ ಫೇಸ್‌ಬುಕ್‌ ಭಾರತದ ಉಪಾಧ್ಯಕ್ಷರ ವಿರುದ್ದ ಅ.15ರವರೆಗೆ ಯಾವುದೇ ಒತ್ತಾಯದ ಕ್ರಮ ಕೈಗೊಳ್ಳದಂತೆ ದೆಹಲಿ ವಿಧಾನಸಭೆಗೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.

ದೆಹಲಿ ವಿಧಾನಸಭೆಯ 'ಶಾಂತಿ ಮತ್ತು ಸೌಹಾರ್ದತೆ' ಸಮಿತಿ ಫೇಸ್‌ಬುಕ್‌ ಭಾರತದ ಉಪಾಧ್ಯಕ್ಷ ಎಂ.ಡಿ.ಅಜಿತ್‌ ಮೋಹನ್‌ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಸಮಿತಿಯನ್ನು ಆಮ್‌ ಆಸ್ಮಿ ಪಕ್ಷದ ಶಾಸಕ ರಾಘವ್‌ ಚಡ್ಡಾ ನೇತೃತ್ವ ವಹಿಸಿದ್ದರು.

ಗಲಭೆಗೆ ಸಂಬಂಧಿಸಿದ ಬಿಜೆಪಿ ನಾಯಕ ದ್ವೇಷದ ಹೇಳಿಕೆಗಳನ್ನು ತಿದ್ದುಪಡಿ ಮಾಡದೆ ಪ್ರಸಾರ ಮಾಡಿದ ಸಾಮಾಜಿಕ ಜಾಲತಾಣದ ನಡೆ ಕುರಿತು ಸಮಿತಿ ವಿವರಣೆ ಬಯಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com