2021ರಲ್ಲಿ ಸಿರಮ್ ಸಂಸ್ಥೆಯಿಂದ 200 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ!

ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ಹೆಚ್ಚುವರಿ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಯನ್ನು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) 2021ರಲ್ಲಿ ಉತ್ಪಾದಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ಹೆಚ್ಚುವರಿ 100 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆಯನ್ನು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) 2021ರಲ್ಲಿ ಉತ್ಪಾದಿಸಲಿದೆ.

ಎಸ್ಐಐ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯನ್ ಲಸಿಕೆಯನ್ನು ತಯಾರಿಸುವ ಗುರಿಯೊಂದಿಗೆ ಈ ಎರಡೂ ಸಂಸ್ಥೆಗಳು ಒಗ್ಗೂಡಿದ್ದವು. ಇದೀಗ ಹೆಚ್ಚುವರಿಯಾಗಿ 100 ಮಿಲಿಯನ್ ಲಸಿಕೆಯನ್ನು ಉತ್ಪಾದಿಸಲಿದೆ. 

ಸಹಯೋಗವು ಈಗ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲು ಎಸ್‌ಐಐಗೆ ಮುಂಗಡ ಬಂಡವಾಳವನ್ನು ಒದಗಿಸುತ್ತದೆ. ಇದರಿಂದಾಗಿ ಒಮ್ಮೆ ಲಸಿಕೆ ಅಥವಾ ಲಸಿಕೆಗಳು ನಿಯಂತ್ರಕ ಅನುಮೋದನೆ ಮತ್ತು ಡಬ್ಲ್ಯುಎಚ್‌ಒ ಪೂರ್ವಭಾವಿತ್ವವನ್ನು ಪಡೆದುಕೊಂಡರೆ, 2021 ರ ಮೊದಲಾರ್ಧದಲ್ಲಿ ಗವಿ ಕೋವಾಕ್ಸ್ ಎಎಂಸಿ ಕಾರ್ಯವಿಧಾನದ ಭಾಗವಾಗಿ ಎಲ್‌ಎಂಐಸಿಗಳಿಗೆ ವಿತರಿಸಬಹುದು ಎಂದು ಕಂಪನಿ ಹೇಳಿದೆ.

ಎಸ್‌ಐಐನ ಸಿಇಒ ಅಡರ್ ಪೂನವಾಲ್ಲಾ, "ಗವಿ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಅತ್ಯಾಸಕ್ತಿಯ ಬೆಂಬಲದ ಮೂಲಕ ಇಮ್ಯುನೊಜೆನಿಕ್ ಲಸಿಕೆ ಯಶಸ್ವಿಯಾದರೆ ನಾವು ಹೆಚ್ಚುವರಿ 100 ಮಿಲಿಯನ್ ಡೋಸ್ ಉತ್ಪಾದಿಸಲಿದ್ದು ಭವಿಷ್ಯದಲ್ಲಿ ಕೋವಿಡ್ 19 ಲಸಿಕೆಗಳನ್ನು ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ತಲುಪಿಸುತ್ತೇವೆ ಎಂದರು. 

ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಭವಿಷ್ಯದ ಲಸಿಕೆಯನ್ನು ವಿಶ್ವದ ನಾನಾ ಭಾಗಗಳಿಗೆ ತಲುಪುತ್ತವೆ ಎಂದು ನೋಡುವ ನಮ್ಮ ಪ್ರಯತ್ನಗಳಿಗೆ ಈ ಸಂಘವು ಅನುಗುಣವಾಗಿದೆ ಎಂದು ಪೂನವಾಲಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com