ಕೊರೋನಾ ವಿರುದ್ಧ ಹೋರಾಟಕ್ಕೆ ವಿಪ್ರೋ, ಅಜೀಮ್ ಪ್ರೇಮ್‌ಜಿ ಫೌಂಡೇಶನ್ ನಿಂದ 1125 ಕೋಟಿ ರೂ ನೆರವು

ವಿಪ್ರೊ ಲಿಮಿಟೆಡ್, ವಿಪ್ರೋ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಒಟ್ಟಾಗಿ ಕೋವಿಡ್-19 ವಿರುದ್ಧದ ಸಮರಕ್ಕೆ  1,125 ಕೋಟಿ ರೂ.ನೆರವನ್ನು ನೀಡಲಿದೆ.  "ಈ ಸಂಪನ್ಮೂಲಗಳು ಸಾಂಕ್ರಾಮಿಕ ರೋಗದ ವಿರುದ್ಧದ ಸಮರದ ಮುಂಚೂಣಿಯಲ್ಲಿ ಮತ್ತು ಅದರ ವ್ಯಾಪಕವಾದ ಮಾನವ ಪ್ರಭಾವವನ್ನು ತಗ್ಗಿಸುವಲ್ಲಿ, ವಿಶೇಷವಾಗಿ ನಮ್ಮ ಸಮಾಜಕ್ಕೆ ಅತ್ಯಂತ ಅನನುಕೂಲಕರ ಆದ್
ಅಜೀಮ್  ಪ್ರೇಮ್‌ಜಿ
ಅಜೀಮ್ ಪ್ರೇಮ್‌ಜಿ

ನವದೆಹಲಿ: ವಿಪ್ರೊ ಲಿಮಿಟೆಡ್, ವಿಪ್ರೋ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಒಟ್ಟಾಗಿ ಕೋವಿಡ್-19 ವಿರುದ್ಧದ ಸಮರಕ್ಕೆ  1,125 ಕೋಟಿ ರೂ.ನೆರವನ್ನು ನೀಡಲಿದೆ.  "ಈ ಸಂಪನ್ಮೂಲಗಳು ಸಾಂಕ್ರಾಮಿಕ ರೋಗದ ವಿರುದ್ಧದ ಸಮರದ ಮುಂಚೂಣಿಯಲ್ಲಿ ಮತ್ತು ಅದರ ವ್ಯಾಪಕವಾದ ಮಾನವ ಪ್ರಭಾವವನ್ನು ತಗ್ಗಿಸುವಲ್ಲಿ, ವಿಶೇಷವಾಗಿ ನಮ್ಮ ಸಮಾಜಕ್ಕೆ ಅತ್ಯಂತ ಅನನುಕೂಲಕರ ಆದ್ಯತೆಯ  ಸಮರ್ಪಿತ ವೈದ್ಯಕೀಯ ಮತ್ತು ಸೇವಾ ಭ್ರಾತೃತ್ವವನ್ನು ಶಕ್ತಗೊಳಿಸಲು ಸಹಾಯ ಮಾಡುತ್ತದೆ" ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ತತ್ ಕ್ಷಣದಲ್ಲಿ ನಿರ್ದಿಷ್ಟ ಪ್ರದೇಶದ ಮಗ್ರವಾದ ಪ್ರತಿಕ್ರಿಯೆಗಾಗಿ  ಕ್ರ್ಮ ತೆಗೆದುಕೊಳ್ಳುವಿಕೆ,  ತಕ್ಷಣದ ಮಾನವೀಯ ನೆರವು ಮತ್ತು ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಶ್ರಮ, ಕೊರೋನಾವೈರಸ್ ಪೀಡಿತರಿಗೆ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗುವುದು. ಈ ಪ್ರತಿಕ್ರಿಯೆಗಳನ್ನು ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಸಮನ್ವಯಗೊಳಿಸಲಾಗುತ್ತದೆ  ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ 1,600-ವ್ಯಕ್ತಿಗಳ ತಂಡವು ದೇಶಾದ್ಯಂತ 350 ಕ್ಕೂ ಹೆಚ್ಚು ಪ್ರಬಲ ನಾಗರಿಕ ಸಮಾಜದ ಪಾಲುದಾರರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸುತ್ತದೆ.

1,125 ಕೋಟಿ ರೂ.ಗಳಲ್ಲಿ, ವಿಪ್ರೋ ಲಿಮಿಟೆಡ್‌ನ 100 ಕೋಟಿ ರೂ., ವಿಪ್ರೋ ಎಂಟರ್‌ಪ್ರೈಸಸ್ ಲಿಮಿಟೆಡ್‌ನ 25 ಕೋಟಿ ರೂ., ಮತ್ತು ಅಜೀಮ್ ಪ್ರೇಮ್‌ಜಿ ಫೌಂಡೇಶನ್ 1,000 ಕೋಟಿ ರೂ.  ಸೇರಿದೆ. . ಈ ಮೊತ್ತವು ವಿಪ್ರೋದ ವಾರ್ಷಿಕ ಸಿಎಸ್ಆರ್ ಚಟುವಟಿಕೆಗಿಂತ ಹೆಚ್ಚುವರಿಯಾಗಿದೆ. ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಸಾಮಾನ್ಯ ಜನೋಪಕಾರಿ ಸಮಾಜಮುಖಿ ಖರ್ಚುಗಳಲ್ಲಿ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com