ಕೋವಿಡ್ -19: ಧಾರಾವಿಯಲ್ಲಿ ಎರಡನೇ ಪ್ರಕರಣ ಪತ್ತೆ, ಪೌರ ಕಾರ್ಮಿಕನಿಗೆ ಸೋಂಕು

ಏಷ್ಯಾದ ಅತಿದೊಡ್ಡ ಕೊಳಚೆ ಪ್ರದೇಶ ಮುಂಬೈಯ ಧಾರಾವಿಯಲ್ಲಿ ಎರಡನೇ ಕೊರೋನಾ ಸೋಂಕು ಪ್ರಕರಣ ಕಂಡುಬಂದಿದೆ. 52 ವರ್ಷದ  ಪೌರ ಕಾರ್ಮಿಕರೊಬ್ಬರಲ್ಲಿ ಈ ಸೋಂಕು ದೃಢಪಟ್ಟಿದೆ. ವೊಲ್ರಿ ಪ್ರದೇಶದಲ್ಲಿ ವಾಸವಾಗಿದ್ದ ಈತನನ್ನು ಧಾರಾವಿಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ನೇಮಿಸಲಾಗಿತ್ತು ಎಂದು ಬಿಎಂಸಿ ಹೇಳಿದೆ. 

Published: 02nd April 2020 01:23 PM  |   Last Updated: 02nd April 2020 01:23 PM   |  A+A-


DharaviSlums1

ಧಾರಾವಿ ಕೊಳಚೆ ಪ್ರದೇಶ

Posted By : Nagaraja AB
Source : PTI

ಮುಂಬೈ: ಏಷ್ಯಾದ ಅತಿದೊಡ್ಡ ಕೊಳಚೆ ಪ್ರದೇಶ ಮುಂಬೈಯ ಧಾರಾವಿಯಲ್ಲಿ ಎರಡನೇ ಕೊರೋನಾ ಸೋಂಕು ಪ್ರಕರಣ ಕಂಡುಬಂದಿದೆ. 52 ವರ್ಷದ  ಪೌರ ಕಾರ್ಮಿಕರೊಬ್ಬರಲ್ಲಿ ಈ ಸೋಂಕು ದೃಢಪಟ್ಟಿದೆ. ವೊಲ್ರಿ ಪ್ರದೇಶದಲ್ಲಿ ವಾಸವಾಗಿದ್ದ ಈತನನ್ನು ಧಾರಾವಿಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ನೇಮಿಸಲಾಗಿತ್ತು ಎಂದು ಬಿಎಂಸಿ ಹೇಳಿದೆ. 

ಸೋಂಕಿನ ಲಕ್ಷಣಗಳು ಕಂಡುಬಂದ ನಂತರ ಚಿಕಿತ್ಸೆ ಪಡೆಯುವಂತೆ ಬಿಎಂಸಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಅವರ ಕುಟುಂಬ ಸದಸ್ಯರು ಹಾಗೂ 23 ಮಂದಿ ಸಹೋದ್ಯೋಗಿಗಳನ್ನು ಕ್ವಾರಂಟೈನಲ್ಲಿ ಇರಲು ಸೂಚಿಸಲಾಗಿದೆ. 

ಧಾರಾವಿ ನಗರದಲ್ಲಿ ಕೊರೋನಾವೈರಸ್ ನಿಂದಾಗಿ 46 ವರ್ಷದ ವ್ಯಕ್ತಿಯೊಬ್ಬ ಬುಧವಾರ ಸಂಜೆ ನಿಧನರಾಗಿದ್ದರು. ಇದರಿಂದ ಆತಂಕಗೊಂಡ ಮಹಾನಗರ ಪಾಲಿಕೆ ಆತ ವಾಸಿಸುತ್ತಿದ್ದ ಕಟ್ಟಡಕ್ಕೆ ಬೀಗ ಹಾಕಿತ್ತು. 

ಮೃತ ವ್ಯಕ್ತಿ ಏಲ್ಲಿಯೂ ಪ್ರವಾಸಕ್ಕೆ ತೆರಳಿರಿಲ್ಲ. ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ಯೋಜನೆಯಡಿ ನಿರ್ಮಾಣಗೊಂಡ ಕಟ್ಟಡದಲ್ಲಿ ಆತ ವಾಸಿಸುತ್ತಿದ್ದ ಎಂದು ಬೃಹನ್ ಮುಂಬೈ ಮುನ್ಸಿಫಲ್ ಕಾರ್ಪೋರೇಷನ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp