ದೆಹಲಿ: ಪ್ರಾಣ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಮೇಲೆ ಉಗುಳುತ್ತಿರುವ ಕ್ವಾರಂಟೈನ್ ನಲ್ಲಿರುವ ಜಮಾತ್ ಕಾರ್ಯಕರ್ತರು!

ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕಿತರ ರಕ್ಷಣೆ ಮಾಡಲು ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಕ್ವಾರಂಟೈನ್ ನಲ್ಲಿರುವ ಜಮಾತ್ ಕಾರ್ಯಕರ್ತರು ಉಗುಳುತ್ತಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ.
ಕ್ವಾರಂಟೈನ್ ಕೇಂದ್ರ
ಕ್ವಾರಂಟೈನ್ ಕೇಂದ್ರ

ನವದೆಹಲಿ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕಿತರ ರಕ್ಷಣೆ ಮಾಡಲು ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಕ್ವಾರಂಟೈನ್ ನಲ್ಲಿರುವ ಜಮಾತ್ ಕಾರ್ಯಕರ್ತರು ಉಗುಳುತ್ತಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಘಿ ಜಮಾತ್ ಮಸೀದಿಯಿಂದ ವಶಕ್ಕೆ ಪಡೆಯಲಾದ ತಬ್ಲೀಘಿ ಜಮಾತ್ ಕಾರ್ಯಕರ್ತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರ ಮೇಲ್ವಿಚಾರಣೆ ಮತ್ತು ಚಿಕಿತ್ಸೆಗಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕ  ಮಾಡಲಾಗಿದೆ. ಆದರೆ ಈ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧವೇ ಜಮಾತ್ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸುತ್ತಿದ್ದು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಉಗುತ್ತಿದ್ದಾರೆ.

ದೆಹಲಿಯಲ್ಲಿರುವ ರೈಲ್ವೇ ಇಲಾಖೆಯ ಕ್ವಾರಂಟೈನ್ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಕ್ವಾರಂಟೈನ್ ಗೃಹದಲ್ಲಿ ಅಡ್ಡಾದಿಡ್ಡಿ ಓಡಾಡತ್ತಿದ್ದ ಕಾರ್ಯಕರ್ತರನ್ನು ಸಿಬ್ಬಂದಿ ತಡೆದಿದ್ದರು. ಈ ವೇಳೆ ಸಿಬ್ಬಂದಿಗಳೊಂದಿಗೆ ಅವರು ವಾಗ್ವಾದ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ  ಊಟದ ವಿಚಾರವಾಗಿ ಮತ್ತೆ ತಗಾದೆ ತೆಗೆದು ವೈದ್ಯರು ಸಿಬ್ಬಂದಿಗಳ ಮೇಲೆ ಉಗುಳಿದ್ದಾರೆ ಎಂದು ಉತ್ತರ ರೈಲ್ವೆ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಜಮಾತ್ ಕಾರ್ಯಕರ್ತರನ್ನು ಬೇರೆ ಸೂಕ್ತ ಸ್ಥಳಗಳಿಗೆ ರವಾನೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಬ್ಬಂದಿಗಳು ಮನವಿ  ಮಾಡಿದ್ದಾರೆ. 

ಈ ವಿಚಾರ ತಿಳಿಯುತ್ತಿದ್ದಂತೆಯೇ ಜಮಾತ್ ಕಾರ್ಯಕರ್ತರು ಇರುವ ಕ್ವಾರಂಟೈನ್ ಕೇಂದ್ರಕ್ಕೆ ಇಂದು ಸಂಜೆ 4 ಪೊಲೀಸ್ ಪೇದೆಗಳು, 6 ಶಸ್ತ್ರಸಜ್ಜಿತ ಸಿಆರ್ ಪಿಎಫ್ ಯೋಧರು, ಪಿಸಿಆರ್ ವ್ಯಾನ್ ಅನ್ನು ಕರ್ತವ್ಯ ಪಾಲನೆಗೆ ನಿಯೋಜಿಸಲಾಗಿದೆ. ಪ್ರಸ್ತುತ ಈ ಕ್ವಾರಂಟೈನ್ ಕೇಂದ್ರದಲ್ಲಿ  ಒಟ್ಟು 167 ಜಮಾತ್ ಕಾರ್ಯಕರ್ತರನ್ನು ಇಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com