ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆ: ರಾಜ್ಯಸಭೆ ಚುನಾವಣೆ ಮುಂದೂಡಿದ ಚುನಾವಣಾ ಆಯೋಗ

ಕೊರೋನಾ ವೈರೆಸ್ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಿರುವ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದೆ.

Published: 03rd April 2020 08:19 PM  |   Last Updated: 03rd April 2020 08:19 PM   |  A+A-


Election Commission

ಕೇಂದ್ರ ಚುನಾವಣಾ ಆಯೋಗ

Posted By : Srinivasamurthy VN
Source : ANI

ನವದೆಹಲಿ: ಕೊರೋನಾ ವೈರೆಸ್ ಭೀತಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಿರುವ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದೆ.

ಇದೇ ವಿಚಾರವಾಗಿ ಕಳೆದ ಮಾರ್ಚ್ 24ರಂದು ಸಭೆ ನಡೆಸಿದ್ದ ಚುನಾವಣಾ ಆಯೋಗ ಮಾರ್ಚ್ 31ರ ಬಳಿಕ ಈ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಹೇಳಿತ್ತು. ಆದರೆ ಈಗಲೂ ಪರಿಸ್ಥಿತಿ ಸುಧಾರಿಸಿದ ಕಾರಣ ಮತ್ತು ಚುನಾವಣೆ ನಡೆಸಲು ಪೂರಕ ವಾತಾವರಣವಿಲ್ಲದ ಕಾರಣದ  ಅನಿರ್ದಿಷ್ಠಾವಧಿಗೆ ಚುನಾವಣೆಯನ್ನು ಮುಂದೂಡಿದೆ. ಈ ಹಿಂದೆ ಘೋಷಣೆಯಾದಂತೆ ಕಳೆದ ಮಾರ್ಚ್ 26ರಂದೇ ರಾಜ್ಯಸಭೆ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಿತ್ತು. ದೇಶದ ವಿವಿಧ ರಾಜ್ಯಗಳ ಒಟ್ಟು 18 ರಾಜ್ಯಸಭಾ  ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.

ರಾಜ್ಯಸಭೆ ಚುನಾವಣೆ ವೇಳೆ ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರು, ಚುನಾವಣಾ ಅಧಿಕಾರಿಗಳು ಹಾಗೂ ಶಾಸಕರು ಒಂದೆಡೆ ಸೇರಬೇಕಾಗುತ್ತದೆ. ಕೊರೊನಾ ವೈರಸ್ ಹರಡುತ್ತಿರುವ ಈ ಕಠಿಣ ಸಂದರ್ಭದಲ್ಲಿ ಎಲ್ಲರನ್ನೂ ಒಂದು ಕಡೆ ಸೇರಿಸುವುದು ಉಚಿತವಲ್ಲ. ಈ ಕಾರಣಕ್ಕೆ  ಚುನಾವಣೆಯನ್ನೇ ಮುಂದೂಡಿರುವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp