1.7 ಕೋಟಿ ಪಿಪಿಇ, 49 ಸಾವಿರ ವೆಂಟಿಲೇಟರ್ ಪೂರೈಕೆಗೆ ಒಪ್ಪಂದ: ಕೇಂದ್ರ ಸರ್ಕಾರ

ದೇಶಾದ್ಯಂತ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ವೈದ್ಯರು ಬಳಕೆ ಮಾಡುವ ಪಿಪಿಇ ಕಿಟ್ ಗಳು ಮತ್ತು ಬೃಹತ್ ಪ್ರಮಾಣದ ವೆಟಿಲೇಟರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.
ವೆಂಟಿಲೇಟರ್ ಗಳು (ಸಂಗ್ರಹ ಚಿತ್ರ)
ವೆಂಟಿಲೇಟರ್ ಗಳು (ಸಂಗ್ರಹ ಚಿತ್ರ)

ನವದೆಹಲಿ: ದೇಶಾದ್ಯಂತ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ವೈದ್ಯರು ಬಳಕೆ ಮಾಡುವ ಪಿಪಿಇ ಕಿಟ್ ಗಳು ಮತ್ತು ಬೃಹತ್ ಪ್ರಮಾಣದ ವೆಟಿಲೇಟರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು ಮಾಹಿತಿ ನೀಡಿದ್ದು, ದೇಶದಲ್ಲಿ 5734 ಕೊರೋನಾ ವೈರಸ್ ಸೋಂಕು ಪ್ರಕರಣಗಳಿದ್ದು, ಈ ಪೈಕಿ ಕಳೆದ 24 ಗಂಟೆಗಳಲ್ಲಿ 549 ಹೊಸ ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ಒಟ್ಟಾರೆ 166  ಸೋಂಕು ಪೀಡಿತರು ಸಾವನ್ನಪ್ಪಿದ್ದು, ಈ ಪೈಕಿ ನಿನ್ನೆ ಒಂದೇ ದಿನ 17 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಈ ವರೆಗೂ 473 ಮಂದಿ ಗುಣಮುಖರಾಗಿದ್ದಾರೆ. 

ಇನ್ನು ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಭಾರತ ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಸರ್ಕಾರ 1.7 ಕೋಟಿ ಪಿಪಿಇ ಕಿಟ್ ಗಳು, 49 ಸಾವಿರ ವೆಂಟಿಲೇಟರ್ ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.  ಅಂತೆಯೇ ಈಗಾಗಲೇ ಇವುಗಳ ಸರಬರಾಜು ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಅಗತ್ಯತೆ ನೋಡಿಕೊಂಡು ಮತ್ತಷ್ಟು ವೆಂಟಿಲೇಟರ್ ಗಳು ಮತ್ತು ಪಿಪಿಇ ಕಿಟ್ ಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ದೇಶೀಯ ವಾಗಿ ವೆಂಟಿಲೇಟಕ್ ಗಳ ನಿರ್ಮಿಸುತ್ತಿರುವ  ಸುಮಾರು 20 ಸಂಸ್ಥೆಗಳೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ನಿಗದಿತ ಅವಧಿಗೆ ವೆಂಟಿಲೇಟರ್ ಗಳ ಸರಬರಾಜಾಗುತ್ತದೆ ಎಂದು ಹೇಳಿದರು.

ಇನ್ನು ಭಾರತೀಯ ರೈಲ್ವೇ ಇಲಾಖೆ 2, 500 ಸಾವಿರಕ್ಕೂ ಅಧಿಕ ವೈದ್ಯರು ಮತ್ತು 35 ಸಾವಿರಕ್ಕೂ ಅಧಿಕ ಪ್ಯಾರಾಮೆಡಿಕಲ್ ಸಿಬ್ಬಂದಿಗಳನ್ನು ಸೇವೆಗೆ ನಿಯೋಜಿಸಿದೆ. ಅಂತೆಯೇ ಕೊರೋನಾ ವೈರಸ್ ನಿರ್ವಹಣೆಗಾಗಿಯೇ ಇಲಾಖೆ 586 ವೈದ್ಯಕೀಯ ಘಟಕಗಳು, 45 ಸಬ್ ಡಿವಿಷನ್ ಆಸ್ಪತ್ರೆಗಳು, 56 ಡಿವಿಷನ್ ಆಸ್ಪತ್ರೆಗಳು, 8 ಉತ್ಪಾದನಾ ಘಟಕ ಆಸ್ಪತ್ರೆಗಳು ಮತ್ತು 16 ವಲಯ ಆಸ್ಪತ್ರೆಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಕುಟುಂಬಕ್ಕೆ ನೆರವು ನೀಡಿ ಅಭಿಯಾನದ ಫಲವಾಗಿ ಹರ್ಯಾಣದ ಕರ್ನಾಲ್ ನಲ್ಲಿ 13 ಸಾವಿರ ಕುಟುಂಬಗಳಿಗೆ 64 ಲಕ್ಷ ರೂ ನೆರವು ನೀಡಲಾಗಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com