ಲಾಕ್ ಡೌನ್ ನಂತಹ ಕಠಿಣ ಕ್ರಮಗಳಿಲ್ಲದೇ ಹೋಗಿದ್ದರೆ ಏ.15ರ ಹೊತ್ತಿಗೆ ಕೊರೋನಾ ಸೋಂಕಿತರ ಸಂಖ್ಯೆ 8.2 ಲಕ್ಷವಾಗಿರುತ್ತಿತ್ತು: ಕೇಂದ್ರ ಸರ್ಕಾರ

ಭಾರತದಂತಹ ಜನಸಂಖ್ಯಾಭರಿತ ದೇಶದಲ್ಲಿ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಹೋಗಿದಿದ್ದರೆ ಏಪ್ರಿಲ್ 15ರ ಹೊತ್ತಿಗೆ ಕೊರೋನಾ ಸೋಂಕಿತರ ಸಂಖ್ಯೆ 8.2 ಲಕ್ಷಕ್ಕೆ ಏರಿಕೆಯಾಗಿರುತ್ತಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್

ನವದೆಹಲಿ: ಭಾರತದಂತಹ ಜನಸಂಖ್ಯಾಭರಿತ ದೇಶದಲ್ಲಿ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಹೋಗಿದಿದ್ದರೆ ಏಪ್ರಿಲ್ 15ರ ಹೊತ್ತಿಗೆ ಕೊರೋನಾ ಸೋಂಕಿತರ ಸಂಖ್ಯೆ 8.2 ಲಕ್ಷಕ್ಕೆ ಏರಿಕೆಯಾಗಿರುತ್ತಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

ಏಪ್ರಿಲ್ 30ರವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ಲಾಕ್ ಡೌನ್ ನಂತಹ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡು  ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರಿಂದಲೇ ಇಂದು ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಸಾವಿರಗಳಲ್ಲಿದೆ. ಒಂದು ವೇಳೆ ಸರ್ಕಾರ ಈ ಕಠಿಣ ನಿರ್ಧಾರವನ್ನು ಕೈಗೊಳ್ಳದೇ ಹೋಗಿದಿದ್ದರೆ ಈ ಸಂಖ್ಯೆ ಲಕ್ಷಗಳಲ್ಲಿರುತ್ತಿತ್ತು ಎಂದು ಹೇಳಿದ್ದಾರೆ.

ಮಾರ್ಚ್ 25ರಂದು ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದರಿಂದಾಗಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇ.41ರಷ್ಟು ಏರಿಕೆಯಾಗುವುದು ತಗ್ಗಿದೆ. ಪ್ರಸ್ತುತ ಅಂಕಿ ಅಂಶಗಳನ್ನೇ ತೆಗೆದುಕೊಳ್ಳುವುದಾದರೆ ಲಾಕ್ ಡೌನ್ ಹಿನ್ನಲೆಯಲ್ಲೂ ಇಂದು ಕೊರೋನಾ  ಸೋಂಕಿತರ ಸಂಖ್ಯೆ 7447 ಇದೆ. ಒಂದು ವೇಳೆ ಲಾಕ್ ಡೌನ್ ಸಮರ್ಪಕವಾಗಿ ಜಾರಿಯಾಗದೇ ಇದ್ದಿದ್ದಲ್ಲಿ ಈ ಸಂಖ್ಯೆ ಕನಿಷ್ಠ 45 ಸಾವಿರಕ್ಕಿಂತಲೂ ಹೆಚ್ಚಿರುತ್ತಿತ್ತು. ಏಪ್ರಿಲ್ 15ರ ಹೊತ್ತಿಗೆ ಈ ಸಂಖ್ಯೆ 8.2 ಲಕ್ಷ ಕ್ಕೆ ಏರೆಕೆಯಾಗಿರುತ್ತಿತ್ತು. ಪ್ರಸ್ತುತ ಕೊರೋನಾ ವೈರಸ್ ಅನ್ನು ತಹಬದಿಗೆ  ತರುವುದೇ ಕೇಂದ್ರ ಸರ್ಕಾರದ ತತ್ ಕ್ಷಣದ ಗುರಿಯಾಗಿದ್ದು, ಈ ಸಂಬಂಧ ಕೈಗೊಳ್ಳಬೇಕಾದ ಎಲ್ಲ ಯೋಜನೆಗಳನ್ನೂ ಕೈಗೊಳ್ಳಲಿದೆ. ಜನರ ಸಾವುನೋವು ಪ್ರಮಾಣ ತಗ್ಗಿಸುವು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಲವ್ ಅಗರ್ವಾಲ್ ಹೇಳಿದರು.

ಇದೇ ವೇಳೆ ಪ್ರಸ್ತುತ ದೇಶಾದ್ಯಂತ ಕೋವಿಡ್ 19 ವೈರಸ್ ನಿರ್ವಹಣೆಗಾಗಿಯೇ 586 ಆಸ್ಪತ್ರೆಗಳಿದ್ದು, ಇಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಪ್ರತ್ಯೇಕಿತ ವಾರ್ಡ್ ಗಳಿವೆ. 11500 ಐಸಿಯು ಬೆಡ್ ಗಳನ್ನು ಕೊರೋನಾ ವೈರಸ್ ಸೋಂಕಿತರಿಗೇ ಮೀಸಲಿರಿಸಲಾಗಿದೆ. 

ವಿಶ್ವ ಪರಿಸರಕ್ಕೆ ಅನುಗುಣವಾಗಿ ಕೊರೋನಾ ವೈರಸ್ ನಿರ್ವಹಣೆಯನ್ನು ಮಾಡಲಾಗುತ್ತಿದೆ. ವಿಶ್ವದ ಇತರೆ ರಾಷ್ಟ್ರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತೂ ಅವಲೋಕನೆ ನಡೆದಿದ್ದು, ತಜ್ಞರಿಂದ ಸಲಹೆ ಪಡೆದು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ 7,447  ಸೋಂಕಿತರಿದ್ದು, ಕೊರೋನಾ ಸಂಬಂಧಿತ 239 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ಸೋಂಕಿತರ ಸಂಖ್ಯೆ 2000 ಗಡಿ ಹತ್ತಿರವಿದೆ. ದೆಹಲಿ ಮತ್ತು ತಮಿಳುನಾಡಿನಲ್ಲಿ 1 ಸಾವಿರ ಗಡಿಯತ್ತ ಇದೆ ಎಂದು ಅಗರ್ವಾಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com