ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ: ದೆಹಲಿ ರೋಗಿ ಚೇತರಿಕೆ

ದೆಹಲಿಯಲ್ಲಿ ಕೊರೋನಾ ಸೋಂಕಿನಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ರೋಗಿಯೊಬ್ಬರಿಗೆ ನೀಡಿದ್ದ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಕೊರೊನಾ ವೈರಸ್ ನಾಶಕ್ಕೆ ಔಷಧಿಗಳನ್ನ ಕಂಡು ಹಿಡಿಯಲಾಗಿದೆ ಎಂದು ಹೇಳಲಾಗಿದ್ದರೂ ಆ ಔಷಧಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೆಹಲಿ: ದೆಹಲಿಯಲ್ಲಿ ಕೊರೋನಾ ಸೋಂಕಿನಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ರೋಗಿಯೊಬ್ಬರಿಗೆ ನೀಡಿದ್ದ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಕೊರೊನಾ ವೈರಸ್ ನಾಶಕ್ಕೆ ಔಷಧಿಗಳನ್ನ ಕಂಡು ಹಿಡಿಯಲಾಗಿದೆ ಎಂದು ಹೇಳಲಾಗಿದ್ದರೂ ಆ ಔಷಧಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಕೆಲವು ಕಡೆ ಏಡ್ಸ್‌ ರೋಗಕ್ಕೆ ನೀಡುತ್ತಿದ್ದ ಔಷಧಿ ನೀಡಿ ರೋಗಿಗಳನ್ನು ಗುಣ ಪಡಿಸುತ್ತಿದ್ದಾರೆ. ಇದರ ಜೊತೆಗೆ ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಪ್ಲಾಸ್ಮಾ ಥೆರಪಿ ಒಂದು ಬಗೆಯ ಚಿಕಿತ್ಸೆ ಆಗಿದೆ. ಕೊರೊನಾ ಪೀಡಿತ ರೋಗಿಗಳಿಗೆ ಈ ಚಿಕಿತ್ಸೆ ನೀಡಿ ಒಂದಿಷ್ಟು ಯಶಸ್ಸುಯಾಗಿರುವ ಉದಾಹರಣೆಗಳು ನಮ್ಮ ಮುಂದೆ ಇದೆ. ಕೋವಿಡ್‌ 19ನಿಂದ ಚೇತರಿಸಿಕೊಂಡ ವ್ಯಕ್ತಿಗಳ ರಕ್ತವನ್ನು ಈ ಪ್ಲಾಸ್ಮಾ ಥೆರಪಿಯಲ್ಲಿ ಬಳಸಲಾಗುವುದು.

ನಮ್ಮ ದೇಹದ ರಕ್ತನಾಳಗಳಲ್ಲಿ ಹರಿಯುವ ರಕ್ತದಲ್ಲಿ ಪ್ಲಾಸ್ಮಾ ಮತ್ತು ರಕ್ತಕಣಗಳು ಇರುತ್ತದೆ. ಈ ರಕ್ತಗಳನ್ನು ಬೇರ್ಪಡಿಸಿದಾಗ ಸಿಗುವ ದ್ರವವೇ ಪ್ಲಾಸ್ಮಾ ಆಗಿರುತ್ತದೆ. ಒಬ್ಬ ವ್ಯಕ್ತಿಯಿಂದ ತೆಗೆದ ಪ್ಲಾಸ್ಮಾದಿಂದ 3-5 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬಹುದು.

ಒಬ್ಬ ವ್ಯಕ್ತಿಯ ದೇಹಕ್ಕೆ ವೈರಾಣು ಸೇರಿದಾಗ ಅದು ಸಹಜವಾಗಿಯೇ ರಕ್ತವನ್ನು ಸೇರಿಕೊಳ್ಳುತ್ತದೆ. ದೇಹಕ್ಕೆ ಹೊರಗಿನ ಅಪರಿಚಿತ ವೈರಾಣು ಬಂದಾಗ ರೋಗ ನಿರೋಧಕ ಶಕ್ತಿಗಳು ಚುರುಕಾಗುತ್ತವೆ. ನಮ್ಮ ದೇಹದಲ್ಲಿ ಲಿಂಪೊಸೈಟ್‌ ಎಂಬ ಬಿಳಿ ರಕ್ತಕಣಗಳು ಆ್ಯಂಟಿಬಾಡಿಗಳನ್ನು ಉತ್ಪಾದಿಸಿ ವೈರಾಣುಗಳ ವಿರುದ್ಧ ಹೋರಾಡುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಮಾತ್ರ ವೈರಾಣು ತನ್ನ ಪ್ರಭಾವ ಬೀರುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com