ಶೈಕ್ಷಣಿಕ ಪುಸ್ತಕ, ಫ್ಯಾನ್ ಮಾರಾಟ ಮಳಿಗೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ, ಮೀನುಗಾರರಿಗೆ ಕಡ್ಡಾಯ ಕೋವಿಡ್-19 ಟೆಸ್ಟ್!

ಕೊರೋನಾ ವೈರಸ್ ಲಾಕ್ ಡೌನ್ ನಿಯಮಾವಳಿಗೆ ಕೇಂದ್ರ ಗೃಹ ಇಲಾಖೆ ಪರಿಷ್ಕರಣೆ ತಂದಿದ್ದು, ಲಾಕ್ ಡೌನ್ ನಿಂದ ಶೈಕ್ಷಣಿಕ ಪುಸ್ತಕ ಅಂಗಡಿ, ಫ್ಯಾನ್ ಮಾರಾಟ ಮಳಿಗೆಗಳಿಗೆ ವಿನಾಯಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ನಿಯಮಾವಳಿಗೆ ಕೇಂದ್ರ ಗೃಹ ಇಲಾಖೆ ಪರಿಷ್ಕರಣೆ ತಂದಿದ್ದು, ಲಾಕ್ ಡೌನ್ ನಿಂದ ಶೈಕ್ಷಣಿಕ ಪುಸ್ತಕ ಅಂಗಡಿ, ಫ್ಯಾನ್ ಮಾರಾಟ ಮಳಿಗೆಗಳಿಗೆ ವಿನಾಯಿತಿ ನೀಡಿದೆ.

ಈ ಕುರಿತಂತೆ ಗೃಹ ಇಲಾಖೆ ಟ್ವೀಟ್ ಮಾಡಿದ್ದು, ಈ ಹಿಂದಿನಂತೆಯೇ ಲಾಕ್ ಡೌನ್ ನಿಂದ ಎಲ್ಲ ರೀತಿಯ ಕೃಷಿ ಚಟುವಟಿಕೆಗಳಿಗೆ ನೀಡಿರುವ ವಿನಾಯಿತಿ ಮುಂದುವರೆಯಲಿದ್ದು, ಇದಲ್ಲದೆ ಶೈಕ್ಷಣಿಕ ಪುಸ್ತಕ ಅಂಗಡಿ, ಫ್ಯಾನ್ ಮಾರಾಟ ಮಳಿಗೆಗಳಿಗೂ ವಿನಾಯಿತಿ ನೀಡಲಾಗಿದೆ ಎಂದು  ಹೇಳಿದೆ.

ಇದಲ್ಲದೆ ಕೃಷಿ ಸಂಶೋಧನಾ ಸಂಸ್ಥೆಗಳು, ತೋಟಗಾರಿಕಾ ಸಂಸ್ಥೆಗಳು ಮತ್ತು ತೋಟಗಾರಿಕಾ ಸಂಬಂಧಿತ ಕೆಲಸಗಳಿಗೆ ವಿನಾಯಿತಿ ನೀಡಲಾಗಿದೆ. ಅಂತರ್ ರಾಜ್ಯ ಗಿಡ-ಮರ ನೆಡುವ ಸಾಮಗ್ರಿಗಳ ರವಾನೆ, ಜೇನುತುಪ್ಪ ಉತ್ಪಾದನೆ ಮತ್ತು ಇತರ ಜೇನುಗೂಡಿನ ಉತ್ಪನ್ನಗಳ  ರವಾನೆಗೂ ವಿನಾತಿಯಿ ನೀಡಲಾಗಿದೆ.

ಮೀನುಗಾರರಿಗೆ ಕಡ್ಡಾಯ ಕೋವಿಡ್-19 ಟೆಸ್ಟ್!
ಅಷ್ಟು ಮಾತ್ರವಲ್ಲದೇ ಮೀನುಗಾರಿಕೆಗೆ ಕೇಂದ್ರ ಗೃಹ ಇಲಾಖೆ ಷರತ್ತು ಬದ್ಧ ಅನುಮತಿ ನೀಡಿದ್ದು, ಮೀನುಗಾರಿಕೆಗೆ ತೆರಳುವ ಮುನ್ನ ಮತ್ತು ಮೀನುಗಾರಿಕೆಯಿಂದ ವಾಪಸ್ ಆದ ಬಳಿಕ ಸಂಬಂಧ ಪಟ್ಟ ಅಧಿಕಾರಿಗೆ ಮಾಹಿತಿ ನೀಡಬೇಕು. ಅಲ್ಲದೆ ಮೀನುಗಾರರು ತಾವು ಸಂಚರಿಸಿದ  ಪ್ರದೇಶಗಳ ಮತ್ತು ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ನೀಡಬೇಕು. ಅಲ್ಲದೆ ಬೋಟ್ ನಲ್ಲಿ ತೆರಳುವ ಮತ್ತು ಮೀನುಗಾರಿಕೆಯಿಂದ ವಾಪಸ್ ಆದ ಎಲ್ಲ ಮೀನುಗಾರರಿಗೂ ಕೊರೋನಾ ವೈರಸ್ ಪರೀಕ್ಷೆ ಕಡ್ಡಾಯ. ಮೀನುಗಾರಿಕೆಗೆ ತೆರಳುವ ಮೀನುಗಾರರು ಕೊರೋನಾ ಟೆಸ್ಟ್ ನಲ್ಲಿ  ಪಾಸಾದರೆ ಮಾತ್ರ ಮೀನುಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ಮೀನುಗಾರಿಕೆಯಿಂದ ವಾಪಸ್ ಬಂದ ಬಳಿಕವೂ ಎಲ್ಲರನ್ನೂ ಕೊರೋನಾ ಟೆಸ್ಟ್ ಗೆ ಒಳಪಡಿಸಬೇಕು. ಮೀನುಗಾರಿಕೆಯಿಂದ ವಾಪಸ್ ಆದ ಮೀನುಗಾರರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಬೇಕು ಎಂದೂ  ಸಚಿವಾಲಯ ನಿರ್ದೇಶನ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com