ಕೊರೋನಾ ಸಂಕಷ್ಟದಲ್ಲೂ ರಾಜಕೀಯ ಮೇಲಾಟ: ಸಂವಿಧಾನದ ಪ್ರಾಥಮಿಕ ಜ್ಞಾನವೂ ಇಲ್ಲ; ದೀದಿ ವಿರುದ್ಧ ಗವರ್ನರ್ ಗರಂ

ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಬಿಕ್ಕಟ್ಟಿನ ವಿಷಯದಲ್ಲಿಯೂ ರಾಜಕೀಯ ಮೇಲಾಟ ಮುಂದುವರಿದಿದೆ.

ನಾನು ಚುನಾಯಿತ ಮುಖ್ಯಮಂತ್ರಿ, ನೀವು ನಾಮ ನಿರ್ದೇಶಿತ ರಾಜ್ಯಪಾಲರು ಎಂದು ಮಮತಾ ಬ್ಯಾನರ್ಜಿ ಬರೆದಿರುವ 5 ಪುಟಗಳ ಪತ್ರಕ್ಕೆ ರಾಜ್ಯಪಾಲ ಜಗದೀಪ್ ಧನಕರ್ ಪ್ರತ್ಯುತ್ತರ ನೀಡಿದ್ದಾರೆ.

ರಾಜ್ಯಪಾಲರು ಕೇವಲ ನಾಮ ನಿರ್ದೇಶಿತರಾದವರು ಎಂದು ನಿರಂತರವಾಗಿ ಹೇಳುತ್ತಿದ್ದೀರಿ, ಇದರಿಂದ ನಿಮಗೆ ಸಂವಿಧಾನದ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂಬುದು ವಿಷಾಧನೀಯ ಎಂದು ಹೇಳಿದ್ದಾರೆ.

ನಿಮ್ಮ ಪತ್ರಕ್ಕೆ ಇದು ನನ್ನ ಮೊದಲ ಪ್ರತಿಕ್ರಿಯೆ, ಸಂಪೂರ್ಣ ದಾಖಲಾತಿಗಳನ್ನು ರಾಜ್ಯದ ಜನತೆ ಮುಂದಿಡುತ್ತೇನೆ, ನೀವು ಮತ್ತು ನಿಮ್ಮ ಸಂಪುಟ ಸದಸ್ಯರ ಅವಿವೇಕತನವನ್ನು ತೋರಿಸುತ್ತೇನೆ ಎಂದು ಹೇಳಿದ್ದಾರೆ.

"ಈ ಮೊದಲು ಕೇಂದ್ರ ತಂಡದ  ವಿರುದ್ಧ ನೀವು ಅನಗತ್ಯ ಆಕ್ಷೇಪ ಎತ್ತಿ ಅಸಹಕಾರ ತೋರಿದಿರಿ. ಈಗ ಅಂತಹದ್ದೇ ಅಧ್ಯಯನಕ್ಕೆ ಬಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡಕ್ಕೆ ಕೆಂಪುಹಾಸಿನ ಅಬ್ಬರದ ಸ್ವಾಗತ  ನೀಡಿದ್ದೀರಿ. ಮಿಡ್ನಾಪುರ ಮತ್ತು ಬಿಷ್ಣುಪುರಕ್ಕೆ ಆ ತಂಡ ಭೇಟಿ ನೀಡಿದೆ ನಿಜ, ಆದರೆ ಅದರಿಂದ ಏನು ಉಪಯೋಗ ಆಗಿದೆ?

ಅದೆಲ್ಲವನ್ನು ನನಗೆ ವಿವರಿಸಿ. ಸಂವಿಧಾನಕ್ಕೆ ಬದ್ಧವಾಗಿ  ನಡೆದುಕೊಳ್ಳಬೇಕಾದ ಸಮಯ ಈಗ ಬಂದಿದೆ. ಒಣ ಅಬ್ಬರದ ಮಾತು ತೊರೆದು ತಾಳ್ಮೆಯಿಂದ ವರ್ತಿಸಿ,’’ ಎಂದು ದೀರ್ಘ ಟ್ವೀಟ್‌ ಮೂಲಕ ದೀದಿಯನ್ನು ಧನ್‌ಖರ್‌ ತರಾಟೆಗೆ  ತೆಗೆದುಕೊಂಡಿದ್ದರು, ಅದಕ್ಕೆ ಮಮತಾ ಬ್ಯಾನರ್ಜಿ 5 ಪುಟಗಳ ಸುದೀರ್ಘ ಪತ್ರವನ್ನು ರಾಜ್ಯಪಾಲರಿಗೆ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com