ಜನರಿಗೆ, ಸರ್ಕಾರಕ್ಕೆ ಬೆಂಬಲ ನೀಡಲು ಮೊದಲು ಸೇನಾಪಡೆಗಳು ಸುರಕ್ಷಿತರಾಗಿರಬೇಕು: ರಕ್ಷಣಾ ಪಡೆಗಳ ಮುಖ್ಯಸ್ಥ ರಾವತ್

ಇಡೀ ದೇಶ ಕೊರೋನಾ ವೈರಸ್ ಎಂಬ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದು, ದೇಶ ಹಾಗೂ ಜನರಿಗೆ ಬೆಂಬಲ ನೀಡಬೇಕಾದರೆ ಮೊದಲು ಸೇನಾಪಡೆಗಳು ಸುರಕ್ಷಿತರಾಗಿರಬೇಕೆಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾನುವಾರ ಹೇಳಿದ್ದಾರೆ. 

Published: 26th April 2020 10:41 AM  |   Last Updated: 26th April 2020 10:41 AM   |  A+A-


Gen Bipin Rawat

ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್

Posted By : Manjula VN
Source : ANI

ನವದೆಹಲಿ: ಇಡೀ ದೇಶ ಕೊರೋನಾ ವೈರಸ್ ಎಂಬ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದು, ದೇಶ ಹಾಗೂ ಜನರಿಗೆ ಬೆಂಬಲ ನೀಡಬೇಕಾದರೆ ಮೊದಲು ಸೇನಾಪಡೆಗಳು ಸುರಕ್ಷಿತರಾಗಿರಬೇಕೆಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾನುವಾರ ಹೇಳಿದ್ದಾರೆ. 

ಎಎನ್ಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೊರೋನಾ ವಿರುದ್ಧ ಹೋರಾಡುತ್ತಿರುವ ಜನರಿಗೆ ಹಾಗೂ ಸರ್ಕಾರಕ್ಕೆ ಬೆಂಬಲ ನೀಡಲು ಮೊದಲು ನಾವು ಸುರಕ್ಷಿತವಾಗಿರಬೇಕೆಂದು ಸೇನಾಪಡೆಗಳು ಅರಿಯಬೇಕಿದೆ ಎಂದು ಹೇಳಿದ್ದಾರೆ. 

ರಕ್ಷಣಾ ಸೇವೆಯಲ್ಲಿರುವ ನಾವು ಕೋರೋನಾ ವೈರಸ್ ವಿರುದ್ಧ ಹೋರಾಟದ ಸಂದರ್ಭದಲ್ಲಿ ನಮ್ಮ ಜವಾಬ್ದಾರಿಯನ್ನು ಅರಿಯಬೇಕಿದೆ. ರಕ್ಷಣಾ ಸೇವೆಗಳು ಆದೇಶ ಮೀರಿ ಕಾರ್ಯನಿರ್ವಹಿಸಬೇಕು. ಆ ಮೂಲಕ ನಮ್ಮ ಜನರು ಹಾಗೂ ಸರ್ಕಾರಕ್ಕೆ ನಮ್ಮಿಂದ ಸಾಧ್ಯವಾದಷ್ಟು ಬೆಂಬಲವನ್ನು ನೀಡಬೇಕು. ಈ ನಿಟ್ಟಿನಲ್ಲಿ ಮೊದಲು ನಾವು ನಮ್ಮನ್ನು ವೈರಸ್ ನಿಂದ ಸುರಕ್ಷಿತವಾಗಿಟ್ಟುಕೊಳ್ಳಬೇಕು. ನಮ್ಮ ಯೋಧರು ಸುರಕ್ಷಿತವಾಗಿದ್ದರೆ, ನಮ್ಮ ಜನರು ಹಾಗೂ ಸರ್ಕಾರವನ್ನು ಬೆಂಬಲಿಸಲು ಸಾಧ್ಯ. ಹೀಗಾಗಿಯೇ ನಾವು ಮಾಸ್ಕ್ ಗಳನ್ನು ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಠಿಣ ಆದೇಶವನ್ನು ನೀಡಿದ್ದೇವೆ. 

ಇದೀಗ ಸೇನೆಯಲ್ಲಿ ಸಭೆ ಹಾಗೂ ಕಾನ್ಫರೆನ್ಸ್ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಯುತ್ತಿದೆ. ಲಾಕ್ಡೌನ್ ಇರುವವರೆಗೂ ಜನರು ಮನೆಗಲಲ್ಲಿಯೇ ಇರುವಂತೆ ತಿಳಿಸಲಾಗಿದೆ. ಜನರು ತಾಳ್ಮೆಯಿಂದ ಇರಬೇಕು. ತಾಳ್ಮೆಕಳೆದುಕೊಳ್ಳುವ ಸಂದರ್ಭ ಇದಲ್ಲ. ಶಿಸ್ತು ಕಾಪಾಡಲು ತಾಳ್ಮೆ ಅತ್ಯಗತ್ಯ. ಸೇನೆಯಲ್ಲಿ ತಾಳ್ಮೆಯಿಂದಿರುವುದು ಅಂತಹ ದೊಡ್ಡ ಕಷ್ಟಕರವೇನಲ್ಲ. ಶಿಸ್ತು ಕಾಪಾಡುವಂತೆ ನಮಗೆ ಮೊದಲಿನಿಂದಲೇ ಹೇಳಿಕೊಡಲಾಗಿದೆ. ಮುಂದಿನ ಕೆಲ ಕಾಲ ತಾಳ್ಮೆಯಿಂದಿರುವುದು ಅತ್ಯಗತ್ಯ. 

ನಮ್ಮ ಯೋಧರೂ ಕೂಡ ಅರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಇದು ಸಂತಸದ ವಿಚಾರ. ಆ್ಯಪ್ ಮೂಲಕ ಸೋಂಕಿತ ವ್ಯಕ್ತಿಗಳು ಕಂಡು ಬಂದ ಕೂಡಲೇ ಕಾರ್ಯಾಚರಣೆ ನಡೆಸಲು ಸುಲಭವಾಗಿದೆ. ವೈರಸ್ ಹರಡದಂತೆ ನೋಡಿಕೊಳ್ಳಲು ಸಹಾಯಕವಾಗುತ್ತಿದೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp