ತಾಜ್ ನಗರ ಆಗ್ರಾ ಸುರಕ್ಷತೆಗಾಗಿ ಮೇಯರ್ ಪತ್ರ: ಸಿಎಂ ಯೋಗಿ ಸರ್ಕಾರದಿಂದ ತಕ್ಷಣವೇ ಸುಧಾರಣೆಗೆ ಕ್ರಮ!  

ಮೇಯರ್ ಪತ್ರ ಬರೆದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದ್ದು, ಗಣನೀಯ ಪ್ರಮಾಣದ ಸುಧಾರಣೆಗಳು ಕಂಡುಬಂದಿದ್ದು, ಕೋವಿಡ್-19 ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ.  
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಆಗ್ರಾ: ಕೊರೋನಾ ವೈರಸ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ವಿಫಲಗೊಂಡಿದ್ದ ಆಗ್ರಾದ ಸ್ಥಳೀಯ ಆಡಳಿತದ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೇಸತ್ತ ಮೇಯರ್ ನವೀನ್ ಜೈನ್ ತಾಜ್ ನಗರವನ್ನು ಮತ್ತೊಂದು ವುಹಾನ್ ಆಗುವುದರಿಂದ ತಪ್ಪಿಸಬೇಕೆಂದು ಸಿಎಂ ಯೋಗಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದರು. 

ಇತ್ತೀಚಿನ ಮಾಹಿತಿಯ ಪ್ರಕಾರ ಮೇಯರ್ ಪತ್ರ ಬರೆದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದ್ದು, ಗಣನೀಯ ಪ್ರಮಾಣದ ಸುಧಾರಣೆಗಳು ಕಂಡುಬಂದಿದ್ದು, ಕೋವಿಡ್-19 ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕಾದ ಸ್ಥಿತಿ ಇದೆ.  

ಕೋವಿಡ್-19 ಸೋಂಕಿತರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು, ಮಾನವ ಹಕ್ಕುಗಳ ಉಲ್ಲಂಘನೆಯಾಗಿ, ವೈದ್ಯಕೀಯ ಸೌಲಭ್ಯ, ಆಹಾರ ಪೂರೈಕೆ ಸಮರ್ಪಕವಾಗಿ ಲಭ್ಯವಾಗದೇ ಇರುವುದೇ ಮೊದಲಾದ ಸಮಸ್ಯೆಗಳಿದ್ದವು. ಈ ಬಗ್ಗೆ ಆಗ್ರಾ ಮೇಯರ್ ಯೋಗಿ ಸರ್ಕಾರದ ಗಮನ ಸೆಳೆದ ಬೆನ್ನಲ್ಲೇ ಸ್ಥಳೀಯ ಸಂಸದ ಎಸ್ ಪಿ ಸಿಂಗ್ ಬಘೇಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿದ್ದು, ಜನರ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. 

ನೋಡಲ್ ಅಧಿಕಾರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಅಲೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕ್ವಾರಂಟೈನ್ ಗೆ ಒಳಗಾಗಿರುವವರಿಗೆ, ಸಾರ್ವಜನಿಕರಿಗೆ ಆಹಾರ, ನೀರಿನ ವ್ಯವಸ್ಥೆಯೂ ಸರಿಯಾಗಿಲ್ಲ ಎಂಬ ದೂರುಗಳ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com