ಆತಂಕದ ನಡುವೆ ಕರ್ನಾಟಕಕ್ಕೆ ಖುಷಿಯ ಸಂಗತಿ: ಗ್ರೀನ್ ಜೋನ್‍ಗೆ ದಾವಣಗೆರೆ- ಲವ್ ಅಗರವಾಲ್

ದೇಶದ 85 ಜಿಲ್ಲೆಗಳಲ್ಲಿ ಕಳದೆ 14 ದಿನಗಳಿಂದ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದಾವಣಗೆರೆ ರೈಲ್ವೆ ನಿಲ್ಧಾಣ
ದಾವಣಗೆರೆ ರೈಲ್ವೆ ನಿಲ್ಧಾಣ

ನವದೆಹಲಿ: ದೇಶದ 85 ಜಿಲ್ಲೆಗಳಲ್ಲಿ ಕಳದೆ 14 ದಿನಗಳಿಂದ ಯಾವುದೇ ಹೊಸ ಕೊರೊನಾ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನವದೆಹಲಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಈ ವಿಷಯ ತಿಳಿಸಿದ್ದಾರೆ.

ದೇಶದ 16 ಜಿಲ್ಲೆಗಳಲ್ಲಿ 28 ದಿನಗಳಿಂದ ಒಂದು ಕೊರೊನಾ ಪಾಸಿಟಿವ್ ಕೇಸ್ಗಳು ದಾಖಲಾಗಿಲ್ಲ. ಈ ಪೈಕಿ ಕರ್ನಾಟಕದ ಸಹ ಸೇರಿದೆ ಎಂದರು. ದಾವಣಗೆರೆಯಲ್ಲಿ ಕಳೆದ 28 ದಿನಗಳಿಂದ ಯಾವುದೆ ಕೊರೊನಾ ಪ್ರಕರಣಗಳು ದಾಖಲಾಗಿಲ್ಲ.

ಅಂದಹಾಗೆ, ದೇಶದ 85 ಜಿಲ್ಲೆಗಳು ಎಂದರೆ, ಇವು ಈಗಾಗಲೇ ಕೊರೊನಾ ಪ್ರಕರಣ ದಾಖಲಾದ ಜಿಲ್ಲೆಗಳಾಗಿವೆ. ಈ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗದೆ, 14 ದಿನಗಳಿಂದ ನಿಯಂತ್ರಣದಲ್ಲಿ ಇದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 27,892ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಈವರೆಗೆ 511 ಮಂದಿಗೆ ಸೋಂಕು ತಗುಲಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com