ಕೇರಳದಲ್ಲಿ ಏರ್ ಇಂಡಿಯಾ ವಿಮಾನ ದುರಂತ: ಐಎಎಫ್ ನಲ್ಲಿ ಬೆಸ್ಟ್ ಪೈಲಟ್ ಆಗಿದ್ದರು ಮೃತ ಪೈಲಟ್ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ!

ಕೇರಳದ ಕೋಝಿಕ್ಕೋಡಿನಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನ ಅಪಘಾತ ಇಬ್ಬರು ಪೈಲಟ್ ಗಳನ್ನು ಬಲಿ ಪಡೆದಿದೆ. 
ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ
ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ

ಕೋಯಿಕ್ಕೋಡ್: ಕೇರಳದ ಕೋಝಿಕ್ಕೋಡಿನಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನ ಅಪಘಾತ ಇಬ್ಬರು ಪೈಲಟ್ ಗಳನ್ನು ಬಲಿ ಪಡೆದಿದೆ. 

ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಹಾಗೂ ಫಸ್ಟ್ ಆಫೀಸರ್ ಅಖಿಲೇಶ್ ಕುಮಾರ್ ಮೃತ ಪೈಲಟ್ ಗಳಾಗಿದ್ದು ಕ್ಯಾಪ್ಟನ್ ಸಾಠೆ ಅವರು ಭಾರತೀಯ ವಾಯುಪಡೆಯಲ್ಲಿ ಟೆಸ್ಟ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು.

1981 ರಲ್ಲಿ ಸೇರ್ಪಡೆಯಾಗಿದ್ದ ಸಾಠೆ 22 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಬೋಯಿಂಗ್ 737 ವಿಮಾನಗಳನ್ನು ಚಾಲನೆ ಮಾಡುವಲ್ಲಿ ಅತ್ಯಂತ ಅನುಭವ ಹೊಂದಿದ್ದರೆಂಬ ಖ್ಯಾತಿಗೆ ಭಾಜನರಾಗಿದ್ದ ಸಾಠೆ ಅವರು ಪ್ರಶಸ್ತಿ ವಿಜೇತ ಪೈಲಟ್ ಆಗಿದ್ದರು.

"ಸಾಠೆ ಅವರಿಗೆ 58 ಎನ್ ಡಿಎ ರಾಷ್ಟ್ರಪತಿ ಚಿನ್ನದ ಪದಕ ಪ್ರದಾನ ಮಾಡಲಾಗಿತ್ತು" ಎಂದು ಓರ್ವ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com