ಬಿಹಾರ: ಅರಾರಿಯಾ ಕಾರಾಗೃಹದ 215 ಕೈದಿಗಳಿಗೆ ಕೊರೋನಾ ಸೋಂಕು

ಬಿಹಾರದ ಅರಾರಿಯಾ ಕಾರಾಗೃಹದ ಸುಮಾರು 215 ಕೈದಿಗಳಿಗೆ ಕೊರೋನಾ ಸೋಂಕು ತಗುಲಿದೆ. ಮಂಗಳವಾರ ಮತ್ತು ಬುಧವಾರ ನಡೆಸಿದ ಪರೀಕ್ಷೆ ವೇಳೆ ಕೊರೋನಾ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಅರಾರಿಯಾ ಕಾರಾಗೃಹದ ಸುಮಾರು 215 ಕೈದಿಗಳಿಗೆ ಕೊರೋನಾ ಸೋಂಕು ತಗುಲಿದೆ. ಮಂಗಳವಾರ ಮತ್ತು ಬುಧವಾರ ನಡೆಸಿದ ಪರೀಕ್ಷೆ ವೇಳೆ ಕೊರೋನಾ ಪತ್ತೆಯಾಗಿದೆ.

ಕೊರೋನಾ ದೃಢಪಟ್ಟ ಕೈದಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಡಿಯಲ್ಲಿ ಸೋಂಕಿತ ಕೈದಿಗಳನ್ನು ಪ್ರತ್ಯೇಕ, ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ 42 ಕೈದಿಗಳಿಗೆ ಮತ್ತು ಬುಧವಾರ 182 ಕೈದಿಗಳಲ್ಲಿ ಸೋಂಕು ಪತ್ತೆಯಾಗಿದೆ, ಎಂದು ತಿಳಿಸಿದ್ದಾರೆ. ಅರಾರಿಯಾ ಕಾರಾಗೃಹದ 706 ಕೈದಿಗಳ ಪೈಕಿ 600 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ 215 ಮಂದಿ ಸೋಂಕಿಗೊಳಪಟ್ಟಿದ್ದಾರೆ.ಸೋಂಕಿತ ಕೈದಿಗಳನ್ನು ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com