1000 ದಿನಗಳಲ್ಲಿ 'ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಜೊತೆಗೆ ಲಕ್ಷದ್ವೀಪ ಸಂಪರ್ಕ: ಪ್ರಧಾನಿ ಮೋದಿ
ಮುಂದಿನ 1000 ದಿನಗಳಲ್ಲಿ ಲಕ್ಷದ್ವೀಪವನ್ನು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್‌ಗೆ ಸಂಪರ್ಕಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
Published: 15th August 2020 11:00 AM | Last Updated: 15th August 2020 11:00 AM | A+A A-

ಪ್ರಧಾನಿ ಮೋದಿ
ನವದೆಹಲಿ: ಮುಂದಿನ 1000 ದಿನಗಳಲ್ಲಿ ಲಕ್ಷದ್ವೀಪವನ್ನು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್‌ಗೆ ಸಂಪರ್ಕಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ಕೆಂಪುಕೋಟೆಯಲ್ಲಿ ಮಾತನಾಡಿರುವ ಅವರು, ದೇಶದಲ್ಲಿ 1300 ಕ್ಕೂ ಹೆಚ್ಚು ದ್ವೀಪಗಳಿದ್ದು ಅದರ ಭೌಗೋಳಿಕ ಸ್ಥಳ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿನ ಅವುಗಳ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕೆಲವು ದ್ವೀಪಗಳಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಕೆಲಸ ನಡೆಸಲಾಗುತ್ತಿದೆ. ಮುಂದಿನ 1000 ದಿನಗಳಲ್ಲಿ ಲಕ್ಷದ್ವೀಪವನ್ನು ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್‌ಗೆ ಸಂಪರ್ಕಿಸಲಾಗುವುದು ಎಂದು ಹೇಳಿದ್ದಾರೆ.
ಡಿಜಿಟಲ್ ಇಂಡಿಯಾದಲ್ಲಿ ಗ್ರಾಮಗಳು ಪಾಲ್ಗೊಳ್ಳುವುದು ಅಗತ್ಯಗತ್ಯವಾಗಿದೆ.ಆಪ್ಟಿಕಲ್ ಫೈಬರ್ ಸಂಪರ್ಕವನ್ನು ನಾವು ವಿಸ್ತರಿಸುತ್ತಿದ್ದೇವೆ. 2014 ಕ್ಕಿಂತ ಮೊದಲು ಕೇವಲ 60 ಗ್ರಾಮ ಪಂಚಾಯಿತಿಗಳು ಮಾತ್ರ ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕ ಹೊಂದಿದ್ದವು. ಕಳೆದ 5 ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯಿತಿಗಳು ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕ ಹೊಂದಿವೆ. ಮುಂಬರುವ 1000 ದಿನಗಳಲ್ಲಿ ರಾಷ್ಟ್ರದ ಪ್ರತಿ ಹಳ್ಳಿಯನ್ನು ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕ ಹೊಂದುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ದೇಶದ ಪ್ರಗತಿಯನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಣಬಹುದಾಗಿದೆ. ಇಂದು ಪ್ರತೀ ಮನೆಯಲ್ಲೂ ವಿದ್ಯುತ್, ಅಡುಗೆ ಅನಿಲ, ಬಡವರಿಗೆ ಬ್ಯಾಂಕ್ ಖಾತೆಗಳನ್ನು ರಚಿಸುವುದು ಅಥವಾ ಎಲ್ಲಾ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣದಲ್ಲಿ ಭಾರತವು ಪ್ರತಿ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿಸಿದ್ದಾರೆ.