ನ್ಯಾಯಾಂಗ ನಿಂದನೆ, ಸುಪ್ರೀಂಕೋರ್ಟ್ ನಿಂದ ಪ್ರಶಾಂತ್ ಭೂಷಣ್ ಗೆ  ಇಂದು ಶಿಕ್ಷೆ  ಪ್ರಕಟ ಸಾಧ್ಯತೆ 

ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿ ಆರೋಪಿ ಸ್ಥಾನದಲ್ಲಿ ನಿಂತಿರುವ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್  ಮಂಗಳವಾರವೇ  ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಕರಣದ ಬಗ್ಗೆ  ಸಾರ್ವಜನಿಕ  ವಲಯದಲ್ಲಿ ಕೂತುಹಲ ಬಹಳ ಹೆಚ್ಚಾಗಿದೆ. 
ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್

ನವದೆಹಲಿ: ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿ ಆರೋಪಿ ಸ್ಥಾನದಲ್ಲಿ ನಿಂತಿರುವ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್  ಮಂಗಳವಾರವೇ  ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಕರಣದ ಬಗ್ಗೆ  ಸಾರ್ವಜನಿಕ  ವಲಯದಲ್ಲಿ ಕೂತುಹಲ ಬಹಳ ಹೆಚ್ಚಾಗಿದೆ. 

"ನಾನು ಮಾಡಿರುವ ಟ್ವೀಟ್ ಗಳ ಬಗ್ಗೆ ಕ್ಷಮೆ ಕೋರಲಾರೆ, ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಮಾಜದ ಸುಧಾರಣೆಗೆ ಟೀಕೆಗಳು ಅಗತ್ಯ.ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನನ್ನ ಟ್ವೀಟ್ ಗಳನ್ನು ಪರಿಗಣಿಸಬೇಕಿತ್ತು. ಈ ನಂಬಿಕೆಯ ಆಧಾರದಲ್ಲಿ ಷರತ್ತು ಅಥವಾ ಬೇಷರತ್ತಾಗಿ ಕ್ಷೆಮೆಯಾಚಿಸಿದರೆ ಅದು ಕಪಟವಾಗುತ್ತದೆ. ಕ್ಷಮೆಯಾಚನೆ ಕೇವಲ ಒಂದು ಮಂತ್ರವಾಗಬಾರದು ಎಂದು ಭೂಷಣ್ ಹೇಳಿದ್ದಾರೆ. 

ಹೇಳಿಕೆ ಮರು ಪರಿಶೀಲನೆಗೆ  ನ್ಯಾಯಾಲಯ ಅವರಿಗೆ  ಮೂರು ದಿನಗಳ ಕಾಲವಕಾಶ  ನೀಡಿತ್ತು ಆದರೂ ತಾವು  ಕಮೆ ಕೋರವುದಿಲ್ಲ ಬದಲಿಗೆ  ಸಂತೋಷದಿಂದಲೇ ಶಿಕ್ಷೆ  ಅನುಭವಿಸುವುದಾಗಿ ಭೂಷಣ್ ಹೇಳಿದ್ದರು ಈ ಹಿನ್ನಲೆಯಲ್ಲಿ ನ್ಯಾಯಾಲಯ ಅವರಿಗೆ ಇಂದೆ ಶಿಕ್ಷೆ ವಿಧಿಸಿ ತೀರ್ಪು ನೀಡಲಿದೆ ಎಂದೂ  ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com