ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ: ಸಂಶೋಧಕರು

ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.
ಎನ್ 95 ಮಾಸ್ಕ್
ಎನ್ 95 ಮಾಸ್ಕ್

ನವದೆಹಲಿ: ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ ಎಂದು ಸಂಶೋದಕರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಅಥವಾ ಕೋವಿಡ್‌–19 ವೈರಸ್ ಹರಡುವಿಕೆಯನ್ನು ಎನ್‌–95 ಮಾಸ್ಕ್ ಗಳು ಪರಿಣಾಮಕಾರಿಯಾಗಿ ತಡೆಯಬಲ್ಲವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಸಂಶೋಧಕರು  ಸೇರಿದಂತೆ ಇತರೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. 

ಕೆಮ್ಮುವಾಗ ಮತ್ತು ಸೀನುವಾಗ ಬರುವ ಡ್ರಾಪ್ ಲೆಟ್ ಗಳಿಂದಾಗಿ (ದ್ರವಾಂಶ) ಹೆಚ್ಚಾಗಿ ಕೋವಿಡ್‌–19 ವೈರಾಣುಗಳು ಹರಡುತ್ತವೆ. ಮಾಸ್ಕ್‌ ಧರಿಸದೇ ಇರುವುದರ ಬದಲು ಕೋವಿಡ್‌–19 ಹರಡುವುದನ್ನು ತಡೆಯಲು ಯಾವುದೇ ಮಾದರಿಯ ಮಾಸ್ಕ್ ಧರಿಸುವುದು ಸೂಕ್ತ ಎಂದೂ ಸಂಶೋಧಕರು ತಿಳಿಸಿದ್ದಾರೆ.

‘ಫಿಸಿಕ್ಸ್‌ ಆಫ್‌ ಫ್ಲ್ಯೂಯಿಡ್ಸ್‌’ ಎಂಬ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದ್ದು, ಇಸ್ರೊದ ಪದ್ಮನಾಭ ಪ್ರಸನ್ನ ಸಿಂಹ ಹಾಗೂ ಕರ್ನಾಟಕದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಸನ್ನ ಸಿಂಹ ಮೋಹನ್‌ ರಾವ್‌ ಅವರು, ಕೆಮ್ಮುವಾಗ ಬಾಯಿಯಿಂದ ಹೊರಬರುವ ಕಣಗಳ  ಹರಡುವಿಕೆಯ ಕುರಿತು ನಡೆಸಿದ ಅಧ್ಯಯನದ ವರದಿ ಪ್ರಕಟಿಸಲಾಗಿದೆ.

ಕೆಮ್ಮುವ ಸಂದರ್ಭದಲ್ಲಿ ಕಣಗಳು ಹೆಚ್ಚು ದೂರ ಹರಡುವುದನ್ನು ಎನ್‌–95 ಮಾಸ್ಕ್ ಗಳು ತಡೆಯುತ್ತವೆ. ಮಾಸ್ಕ್ ಇಲ್ಲದೇ ಕೆಮ್ಮಿದ ಸಂದರ್ಭದಲ್ಲಿ ಬಾಯಿಯಿಂದ ಕಣಗಳು 3 ಮೀಟರ್‌ವರೆಗೆ ಹರಡುತ್ತವೆ. ಸಾಮಾನ್ಯ ಮಾಸ್ಕ್ ಗಳನ್ನು ಧರಿಸಿದರೂ ಇದರ ಹರಡುವಿಕೆ ದೂರ 0.50 ರಿಂದ 1.5 ಮೀಟರ್‌ಗೆ‌  ಇಳಿಕೆಯಾಗುತ್ತದೆ. ಅದೇ ಎನ್‌–95 ಮುಖಗವಸುಗಳನ್ನು ಧರಿಸಿದರೆ ಈ ದೂರ 0.25ಕ್ಕೆ ಇಳಿಕೆಯಾಗುತ್ತದೆ’ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com