ಕೇರಳ: ಓಣಂ ಮುನ್ನಾದಿನ ಇಬ್ಬರು ಡಿವೈಎಫ್‌ಐ ಕಾರ್ಯಕರ್ತರ ಕೊಲೆ

ಕೇರಳದಲ್ಲಿ ಓಣಂ ಮುನ್ನಾದಿನದಂದು ಇಬ್ಬರು ಡಿವೈಎಫ್‌ಐ ಕಾರ್ಯಕರ್ತರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಇದು ಕಾಂಗ್ರೆಸ್ ಕೃತ್ಯ ಎಂದು ಸಿಪಿಎಂ ಆರೋಪಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳದಲ್ಲಿ ಓಣಂ ಮುನ್ನಾದಿನದಂದು ಇಬ್ಬರು ಡಿವೈಎಫ್‌ಐ ಕಾರ್ಯಕರ್ತರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಇದು ಕಾಂಗ್ರೆಸ್ ಕೃತ್ಯ ಎಂದು ಸಿಪಿಎಂ ಆರೋಪಿಸಿದೆ. 

ಭಾನುವಾರ ರಾತ್ರಿ ತೆಂಪಿಮೂಡುವಿನಲ್ಲಿ ಸಶಸ್ತ್ರ ಸಜ್ಜಿತ ಗುಂಪೊಂದು ಡಿವೈಎಫ್ಐ ಕಾರ್ಯಕರ್ತರನ್ನು ಹತ್ಯೆ ಮಾಡಿದೆ. 

ವೆಂಬಯಂ ಬಳಿ ಮಿಧಿಲಾಜ್(30) ಮತ್ತು ಮುಹಮ್ಮದ್ ಹಕ್(24) ಅವರನ್ನು ಹತ್ಯೆ ಮಾಡಲಾಗಿದೆ.

ದಾಳಿಯಲ್ಲಿ ನೇರವಾಗಿ ಭಾಗಿಯಾದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓಝುಕುಪರಾ ಮೂಲದ ಮಿಧಿಲಾಜ್ ಮತ್ತು ಕಲುಂಗಿನ್ಮುಘಮ್ ಮೂಲದ ಹಕ್ ಅವರ ಸ್ಥಳೀಯ ಡಿವೈಎಫ್‌ಐ ಘಟಕಗಳೊಂದಿಗೆ ಸಂಬಂಧ ಹೊಂದಿದ್ದರು.

ಆರೋಪಿಗೊಳು ಕಾಂಗ್ರೆಸ್ ಜತೆ ನಂಟು ಹೊಂದಿದ್ದು, ಕೊಲೆಗಳಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಒತ್ತಾಯಿಸಿದೆ.

ಆದರೆ, ಕಾಂಗ್ರೆಸ್ ನಾಯಕರು ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಈ ಕೊಲೆಗಳು ಎರಡು ಗುಂಪಿನ ಗೂಂಡಾಗಳ ನಡುವಿನ ಮಾರಾಮಾರಿಯ ಪರಿಣಾಮವಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com