ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ: ಲೀಟರ್ ಬೆಲೆ 10,000 ರೂ., ಹಲವು ರೋಗಗಳಿಗೆ ಇದು ರಾಮಬಾಣ!

ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು... ಇದು ಹಳೆಯ ಮಾತು... ಕತ್ತೆ ಹಾಲು ಸೇವಿಸಿದರೆ ಅನಾರೋಗ್ಯ ಹತ್ತಿರ ಸುಳಿಯದು..! ಇದು ಹೊಸ ಮಾತು. ಮನುಬೋಲುವಿನಲ್ಲಿ ಕತ್ತೆಯ ಹಾಲು ಮಾರಾಟ ತೀವ್ರ ಭರಾಟೆ ಪಡೆದುಕೊಂಡಿದೆ.
ಕತ್ತೆ ಹಾಲು
ಕತ್ತೆ ಹಾಲು

ಅಮರಾವತಿ: ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು... ಇದು ಹಳೆಯ ಮಾತು... ಕತ್ತೆ ಹಾಲು ಸೇವಿಸಿದರೆ ಅನಾರೋಗ್ಯ ಹತ್ತಿರ ಸುಳಿಯದು..! ಇದು ಹೊಸ ಮಾತು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಮನುಬೋಲುವಿನಲ್ಲಿ ಕತ್ತೆಯ ಹಾಲು ಮಾರಾಟ ತೀವ್ರ ಭರಾಟೆ ಪಡೆದುಕೊಂಡಿದೆ. 

ಕರೀಂನಗರ ಜಿಲ್ಲೆ ಮಂಚಿರ್ಯಾಲದ 20 ಕುಟುಂಬಗಳು ಮನುಬೋಲು ಮಂಡಲಂ ಹಲವು ಗ್ರಾಮಗಳಲ್ಲಿ ಕತ್ತೆ ಹಾಲು ಮಾರಾಟ ಮಾಡುತ್ತಿವೆ. ಈ ಹಾಲು ಸೇವನೆಯಿಂದ ದೀರ್ಘಕಾಲದ ರೋಗಗಳು ಗುಣವಾಗುತ್ತವೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಜನರು ಹಾಲು ಖರೀದಿಸಲು ಮುಗಿಬಿದ್ದಿದ್ದಾರೆ.

ಕತ್ತೆ ಹಾಲು ಎಂದ ತಕ್ಷಣ ಜನರು ಮುಖ ಸಿಂಡರಿಸುವುದು ಸಹಜ. ಆದರೆ ಈ ಹಾಲು ಹೊಂದಿರುವ ಮಹತ್ವ, ಬೇಡಿಕೆ ನೋಡಿದರೆ ಅಚ್ಚರಿ ಪಡುವುದು ನಿಶ್ಚಿತ. ಪ್ರಕಾಶಂ ಜಿಲ್ಲೆ ಮಾರ್ಕಪುರಂನಲ್ಲಿ ಹಾಲು ಖರೀದಿ ತೀವ್ರಗೊಂಡಿದೆ. ವಿಶೇಷವಾಗಿ ಮಕ್ಕಳಿಗೆ ಕತ್ತೆ ಹಾಲು ಕುಡಿಸುವುದು ಸಂಜೀವಿನಿಗೆ ಸಮಾನ ಎಂಬ ಹಿರಿಯರ ಮಾತುಗಳು ಬೇಡಿಕೆಯನ್ನು ತೀವ್ರಗೊಳಿಸಿದೆ. 

ಕತ್ತೆ ಹಾಲಿಗಿರುವ ಬೇಡಿಕೆಯಿಂದಾಗಿ ಬೆಲೆ ಗಗನಕ್ಕೇರಿದೆ. 5 ಮಿಲಿ ಹಾಲಿನ ಬೆಲೆ 50 ರೂಪಾಯಿಯಾಗಿದ್ದು, ಲೀಟರ್‌ಗೆ 10 ಸಾವಿರ ರೂಪಾಯಿಯಾಗಿದೆ. ಆದರೂ ಜನರು ಖರೀದಿಸಲು ಮುಗಿಬೀಳುತ್ತಿದ್ದಾರೆ. ಕತ್ತೆಯ ಹಾಲು ಮಕ್ಕಳಲ್ಲಿ ಹಸಿವು ಹೆಚ್ಚಿಸುವ, ಆಸ್ತಮಾ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ರಾಮಬಾಣ ಎಂಬ ಮಾತುಗಳು ಜನಜನಿತವಾಗಿವೆ.

ವಯಸ್ಕರು ಸಹ ಈ ಹಾಲಿನ ಸೇವನೆಯಿಂದ ಗೊರಕೆ, ತಲೆನೋವು, ಎದೆಯುರಿ, ವಾಕರಿಕೆ ಮತ್ತು ಸೆಳೆತದಂತಹ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com