ತಮಿಳು ನಾಡು ದಕ್ಷಿಣ ಕರಾವಳಿಯಲ್ಲಿ ವಾಯಭಾರ ಕುಸಿತ ಸ್ಥಿರ: ಮುಂದಿನ 12 ತಾಸಿನಲ್ಲಿ ದುರ್ಬಲ ಸಾಧ್ಯತೆ

ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ ಕಚೇರಿ ತನ್ನ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.
ಕಂದಮಂಗಲಂ ತಾಲ್ಲೂಕಿನ ಸೊರಪುರ ಗ್ರಾಮ
ಕಂದಮಂಗಲಂ ತಾಲ್ಲೂಕಿನ ಸೊರಪುರ ಗ್ರಾಮ

ಚೆನ್ನೈ: ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ ಕಚೇರಿ ತನ್ನ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.

ಮನ್ನಾರ್ ಕೊಲ್ಲಿಗೆ ಹತ್ತಿರದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿರುವ ವಾಯುಭಾರ ಕುಸಿತ, ರಾಮನಾಥಪುರಂ ಕರಾವಳಿಯಿಂದ ನೈರುತ್ಯಕ್ಕೆ 40 ಕಿ.ಮೀ ದೂರದಲ್ಲಿ ಮತ್ತು ಪಂಬನ್‌ನಿಂದ ಪಶ್ಚಿಮ-ನೈರುತ್ಯಕ್ಕೆ 70 ಕಿ.ಮೀ.ದೂರದಲ್ಲಿ ಮನ್ನಾರ್ ಕೊಲ್ಲಿಯನ್ನು ಕೇಂದ್ರೀಕರಿಸಿದೆ. 

ಗಾಳಿಯ ವೇಗ 40-50 ರಿಂದ 60 ಕಿ.ಮೀ.ವೇಗದಲ್ಲಿ ಕೂಡಿದೆ. ಮುಂದಿನ 12 ತಾಸು ಇದೇ ರೀತಿ ಸ್ಥಿರವಾಗಿರುವ ವಾಯಭಾರ ಕುಸಿತ ನಂತರ ದುರ್ಬಲಗೊಳ್ಳಲಿದೆ. 

ವಾಯುಭಾರ ಕುಸಿತದ ಪರಿಣಾಮವಾಗಿ ತಮಿಳುನಾಡು, ಪುದುಚೇರಿ, ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇರಳದ 7 ಜಿಲ್ಲೆಗೆ ನೀಡಲಾಗಿದ್ದ ರೆಡ್ ಅಲರ್ಟ್ ಹಿಂಪಡೆಯಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com