ಉತ್ತರ ಪ್ರದೇಶ: ಹೊಸ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಅಡಿ ಏಳು ಮಂದಿಯ ಬಂಧನ

ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಧಾರ್ಮಿಕ ಮತಾಂತರ ನಿಷೇಧ(ಲವ್ ಜಿಹಾದ್) ಕಾಯಿದೆ ಅಡಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೀತಾಪುರ: ಉತ್ತರ ಪ್ರದೇಶ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಧಾರ್ಮಿಕ ಮತಾಂತರ ನಿಷೇಧ(ಲವ್ ಜಿಹಾದ್) ಕಾಯಿದೆ ಅಡಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಸೀತಾಪುರ ಜಿಲ್ಲೆಯಲ್ಲಿ ಹಿಂದೂ ಯುವತಿಯನ್ನು ಆಕೆಯ ಮನೆಯಿಂದ ಅಪಹರಿಸಿದ ಆರೋಪದ ಮೇಲೆ ಈ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನವೆಂಬರ್ 24 ರಂದು ಈ ಘಟನೆ ನಡೆದಿದ್ದು, ನವೆಂಬರ್ 27ರಂದು ಕೇಸ್ ದಾಖಲಾಗಿತ್ತು. ಈ ಸಂಬಂಧ ಸೀತಾಪುರದ ಟ್ಯಾಂಬೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ತಲಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಸೀತಾಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದಿಕ್ಷಿತ್ ಅವರು ತಿಳಿಸಿದ್ದಾರೆ.

ಯುವತಿ ನಾಪತ್ತೆಯಾದ ದಿನದಿಂದಲೂ ಆರೋಪಿ ಜಬ್ರೇಲ್ ಕೂಡ ಗ್ರಾಮದಿಂದ ಕಾಣೆಯಾಗಿದ್ದ ಎಂದು ಯುವತಿ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಹೊಸ ಧಾರ್ಮಿಕ ಮತಾಂತರ ನಿಷೇಧ ಕಾನೂನಿನಡಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 50,000 ರೂ.ದಂಡ ವಿಧಿಸಲು ಅವಕಾಶ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com