ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಒಮ್ಮತದಿಂದ ತೀರ್ಮಾನ ಕೈಗೊಳ್ಳುತ್ತೇವೆ: ರೈತ ಮುಖಂಡರು

ನಾವು ರೈತ ಸಂಘಟನೆಯವರೆಲ್ಲರೂ ಅವಿರೋಧವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಲ್ಲಿ ಎಲ್ಲರದ್ದೂ ಸಹಮತ ಮುಖ್ಯವಾಗುತ್ತದೆಯೇ ಹೊರತು ಬಹುಮತವಲ್ಲ ಎಂದು ರೈತ ಮುಖಂಡ ಶಿವಕುಮಾರ್ ಕಕ್ಕ ಹೇಳಿದ್ದಾರೆ. 
ನಿನ್ನೆ ಸಿಂಘು ಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ರೈತ ಸಂಘಟನೆ ಮುಖಂಡರು
ನಿನ್ನೆ ಸಿಂಘು ಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ರೈತ ಸಂಘಟನೆ ಮುಖಂಡರು

ನವದೆಹಲಿ: ನಾವು ರೈತ ಸಂಘಟನೆಯವರೆಲ್ಲರೂ ಅವಿರೋಧವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಲ್ಲಿ ಎಲ್ಲರದ್ದೂ ಸಹಮತ ಮುಖ್ಯವಾಗುತ್ತದೆಯೇ ಹೊರತು ಬಹುಮತವಲ್ಲ ಎಂದು ರೈತ ಮುಖಂಡ ಶಿವಕುಮಾರ್ ಕಕ್ಕ ಹೇಳಿದ್ದಾರೆ. 

ಕೇಂದ್ರ ಸರ್ಕಾರದ ಸುಧಾರಿತ ಮೂರು ಕೃಷಿ ಮಸೂದೆಗಳನ್ನು ರೈತ ಸಂಘಟನೆಗಳು ಸಂಪೂರ್ಣವಾಗಿ ತಿರಸ್ಕರಿಸಿರುವುದರ ಕುರಿತು ಮತ್ತು ರೈತ ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿ ಕುರಿತು ಈ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಮುಂದೆ ಮಾತನಾಡಿದ ಅವರು, ರೈತ ಸಂಘಟನೆಗಳ ಮಧ್ಯೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ. ನಿನ್ನೆ ಅಪರಾಹ್ನ ಎಲ್ಲಾ ರೈತ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಮೂರು ಸುಧಾರಿತ ಕೃಷಿ ಮಸೂದೆಗಳನ್ನು ಸರ್ಕಾರ ಹಿಂಪಡೆದು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ನಿರ್ದಿಷ್ಟ ಕಾನೂನನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

ನಾವೆಲ್ಲರೂ ಅವಿರೋಧವಾಗಿ ತೀರ್ಮಾನ ಕೈಗೊಳ್ಳುತ್ತೇವೆ. ಇದು ಸಹಮತದ ವಿಷಯವೇ ಹೊರತು ಇಲ್ಲಿ ಬಹುಮತ ಬರುವುದಿಲ್ಲ. ಕೆಲವರು ಮಾತ್ರ ಇದಕ್ಕೆ ಒಪ್ಪುವುದು, ಇನ್ನು ಕೆಲವರು ಒಪ್ಪುವುದಿಲ್ಲ ಎಂಬ ಪ್ರಶ್ನೆ ಇಲ್ಲಿಲ್ಲ. ಎಲ್ಲಾ ಸಂಘಟನೆಗಳು ಮಸೂದೆಗಳನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಿದರೆ ಅದುವೇ ನಮ್ಮ ಕೊನೆಯ ನಿರ್ಧಾರವಾಗುತ್ತದೆ. ಇಲ್ಲಿ ವೈಯಕ್ತಿಕ ಅಭಿಪ್ರಾಯವಿಲ್ಲ ಎಂದು ಕಕ್ಕ ಹೇಳಿದರು.

ಕಳೆದ 5 ಸುತ್ತಿನ ಸರ್ಕಾರ ಮತ್ತು ರೈತ ಸಂಘಟನೆಗಳ ಮಧ್ಯೆ ನಡೆದ ಸಭೆಯಲ್ಲಿ ಒಂದೇ ವಿಷಯವನ್ನು ಸರ್ಕಾರ ನಮ್ಮ ಮುಂದಿಟ್ಟಿದ್ದು, ಕೊನೆಗೆ ನಾವು ಯಸ್ ಅಥವಾ ನೋ ಎಂದು ಹೇಳುತ್ತೀರೋ ಎಂದು ಕೇಳಿದವು. ಅದು ಮೂರು ಮಸೂದೆಗಳನ್ನು ಹಿಂಪಡೆದು, ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದೋ ಅಥವಾ ಅಲ್ಲವೋ ಎಂದು ಕೇಳಿದೆವು ಎಂದು ಕಕ್ಕ ಸರ್ಕಾರದ ಪ್ರತಿನಿಧಿಗಳ ಜೊತೆ ಇಷ್ಟರವರೆಗೆ ನಡೆದ ಸಭೆಯ ಬಗ್ಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com