ಮಹಾರಾಷ್ಟ್ರ: ಕಂಗನಾ ರಣಾವತ್ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್ ಸಲ್ಲಿಸಿದ ಶಿವಸೇನಾ ಶಾಸಕ

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸ್ ವೊಂದನ್ನು ಶಿವಸೇನಾ ಶಾಸಕ ಪ್ರತಾಸ್ ಸರ್ ನಾಯಕ್ , ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.
ಪ್ರತಾಪ್ ಸರ್ ನಾಯಕ್, ಕಂಗನಾ ರಣಾವತ್
ಪ್ರತಾಪ್ ಸರ್ ನಾಯಕ್, ಕಂಗನಾ ರಣಾವತ್

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸ್ ವೊಂದನ್ನು ಶಿವಸೇನಾ ಶಾಸಕ ಪ್ರತಾಸ್ ಸರ್ ನಾಯಕ್ , ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.

ನನ್ನ ಮುಖ ಮುರಿಯುವುದಾಗಿ ಬೆದರಿಕೆ ಹಾಕಿದವರ ಮನೆಯಲ್ಲಿ ಇಡಿ ದಾಳಿ ವೇಳೆಯಲ್ಲಿ ಪಾಕಿಸ್ತಾನದ ಕ್ರೆಡಿಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾಗಿ ನೋಟಿಸ್ ನಲ್ಲಿ ಆರೋಪಿಸಲಾಗಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎರಡು ಬಾರಿ ತಮ್ಮ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಪತ್ತೆಯಾಗಿಲ್ಲ ಎಂದು ಸರ್ ನಾಯಕ್ ನೋಟಿಸ್ ನಲ್ಲಿ ಹೇಳಿದ್ದಾರೆ.

ಇಡಿ ವಿಚಾರಣೆಗೆ ತಾನೂ ಹಾಗೂ ತಮ್ಮ ಮಗ ಸಹಕರಿಸಿದ್ದು, ಇದರಲ್ಲಿ ಯಾವುದೇ ವಿವಾದ ಇರಲಿಲ್ಲ ಆದರೆ, ಕಂಗನಾ ಟ್ವೀಟ್ ನಂತರ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ತಮ್ಮಗೆ ಅಪಮಾನವಾಗುವಂತಹ ಸುದ್ದಿಗಳು ಬಿತ್ತರಗೊಂಡಿವೆ ಎಂದು ಸರ್ ನಾಯಕ್ ಹೇಳಿಕೊಂಡಿದ್ದಾರೆ.

ನೋಟಿಸ್ ನ್ನು ಮಹಾರಾಷ್ಟ್ರ ವಿಧಾನಸಭೆಯ ಹಕ್ಕುಚ್ಯುತಿ ಸಮಿತಿಗೆ ವರ್ಗಾಯಿಸುವಂತೆ ಪ್ರಧಾನ ಕಾರ್ಯದರ್ಶಿ ಬಳಿ ಸರ್ ನಾಯಕ್ ಮನವಿ ಮಾಡಿಕೊಂಡಿದ್ದು, ಕಂಗನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com