ಬಿಹಾರದಲ್ಲಿ 'ಖೋಟಾ' ದಾಖಲೆ ಹೊಂದಿದ್ದ ಐವರು ಅಫ್ಘನ್ನರ ಬಂಧನ 

ಬಿಹಾರದಲ್ಲಿ ಖೋಟಾ ದಾಖಲೆಗಳೊಂದಿಗೆ ಜೀವನ ನಡೆಸುತ್ತಿದ್ದ ಐವರು ಅಫ್ಘನ್ನರನ್ನು ಪೊಲೀಸರು ಬಂಧಿಸಿದ್ದಾರೆ. 
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)

ಕತಿಹಾರ್: ಬಿಹಾರದಲ್ಲಿ ಖೋಟಾ ದಾಖಲೆಗಳೊಂದಿಗೆ ಜೀವನ ನಡೆಸುತ್ತಿದ್ದ ಐವರು ಅಫ್ಘನ್ನರನ್ನು ಪೊಲೀಸರು ಬಂಧಿಸಿದ್ದಾರೆ. 

ಕತಿಹಾರ್ ಟೌನ್ ನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕತಿಹಾರ್ ಟೌನ್ ನಲ್ಲಿ ಅವರ ಪೌರತ್ವಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳೊಂದಿಗೆ ಜೀವಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕತಿಹಾರ್ ನ ಎಸ್ ಡಿಪಿಒ ಅಮರ್ ಕಾಂತ್ ಝಾ ನೀಡಿರುವ ಮಾಹಿತಿಯ ಪ್ರಕಾರ, ವಿದೇಶಿ ಪ್ರಜೆಗಳ ಪೈಕಿ ಘುಲಾಮ್ ಎಂಬಾತ ತನ್ನ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಿದ್ದ ಈ ವೇಳೆ ಆತನ ಗುರುತನ್ನು ಕೇಳಿದ ಪೊಲೀಸರಿಗೆ ಆತನ ನಿಜವಾದ ಕಥೆ ಗೊತ್ತಾಗಿದ್ದು, ಕೊನೆಗೆ ತಾನು ಆಫ್ಘನ್ ಪ್ರಜೆ ಎಂದು ಒಪ್ಪಿಕೊಂಡಿದ್ದಾನೆ.

ಚೌಧರಿ ಮೊಹಲ್ಲಾದಲ್ಲಿ ಆತನೊಂದಿಗೆ ಇದ್ದ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಗೆ ಸಂಬಂಧಿಸಿದ ಪೌರತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಅದು ನಕಲಿ ಎಂಬಂತೆ ಕಾಣುತ್ತಿದೆ" ಎನ್ನುತ್ತಾರೆ ಪೊಲೀಸರು

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ನಕಲಿ ದಾಖಲೆಯೊಂದಿಗೆ ಇದ್ದ ವ್ಯಕ್ತಿಗಳು ಬಡ್ಡಿ ವ್ಯವಹಾರದಲ್ಲಿಯೂ ತೊಡಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆಯಲ್ಲಿ ಈಗ ಗುಪ್ತಚರ ಇಲಾಖೆಯನ್ನೂ ಸೇರಿಕೊಂಡಿದ್ದು, ತನಿಖೆ ಚುರುಕುಗೊಂಡಿದೆ. ಈ ವಿದೇಶಿಗಳು ಪಾಕಿಸ್ತಾನದಿಂದ ಅಕ್ರಮವಾಗಿ ಬಂದವರೂ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com