ಅಂಚೆ ಚೀಟಿ ಮೇಲೆ ಛೋಟಾ ರಾಜನ್, ಮುನ್ನಾ ಭಜರಂಗಿ ಭಾವಚಿತ್ರ: ತನಿಖೆಗೆ ಆದೇಶ

ಭೂಗತ ಪಾತಕಿ ಛೋಟಾರಾಜನ್‌ ಮತ್ತು ಹತನಾಗಿರುವ ಗ್ಯಾಂಗ್‌ಸ್ಟರ್‌ ಮುನ್ನಾ ಭಜರಂಗಿ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಅಂಚೆ ವಿಭಾಗ ತನಿಖೆಗೆ ಆದೇಶಿಸಿದೆ. 
ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಚಿತ್ರ
ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಚಿತ್ರ

ಕಾನ್ಪುರ: ಭೂಗತ ಪಾತಕಿ ಛೋಟಾರಾಜನ್‌ ಮತ್ತು ಹತನಾಗಿರುವ ಗ್ಯಾಂಗ್‌ಸ್ಟರ್‌ ಮುನ್ನಾ ಭಜರಂಗಿ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಅಂಚೆ ವಿಭಾಗ ತನಿಖೆಗೆ ಆದೇಶಿಸಿದೆ. 

‘ಮೈ ಸ್ಟಾಂಪ್‌‘ ಯೋಜನೆಯಡಿ ರಾಜನ್ ಮತ್ತು ಭಜರಂಗಿಯ ಫೋಟೊಗಳಿರುವ ತಲಾ 12 ಅಂಚೆ ಚೀಟಿಗಳನ್ನು ಕೆಲವು ವರ್ಷಗಳ ಹಿಂದೆ ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ‘ಮೈ ಸ್ಟಾಂಪ್‘ ಯೋಜನೆ ನಿರ್ವಹಿಸುವ ವಿಭಾಗದ ಲೋಪದಿಂದಾಗಿ ಇಂಥ ಘಟನೆ ನಡೆದಿದೆ‘ ಎಂದು ಹೇಳಿರುವ ಪೋಸ್ಟ್‌ಮಾಸ್ಟರ್‌  ಜನರಲ್ ವಿ.ಕೆ.ವರ್ಮಾ, ‘ಈ ಕುರಿತು ತನಿಖೆಗೆ ಆದೇಶಿಸಲಾಗಿದೆ‘ ಎಂದು ತಿಳಿಸಿದರು.

ಅಪರಿಚಿತ ವ್ಯಕ್ತಿಯೊಬ್ಬ 5 ರು. ಮೌಲ್ಯದ, 600 ರು ಮೊತ್ತ ನೀಡಿ ಇಲಾಖೆಯಿಂದ ವೈಯಕ್ತಿಕ ಫೋಟೊಗಳನ್ನು ಮುದ್ರಿಸಿದ ಅಂಚೆ ಚೀಟಿಗಳನ್ನು ಖರೀದಿಸಿದ್ದಾನೆ. ಅಗತ್ಯವಿರುವ ಗುರುತಿನ ಚೀಟಿಯ ಪುರಾವೆಗಳಿಲ್ಲದೇ ವ್ಯಕ್ತಿಯೊಬ್ಬ ‘ಮೈ ಸ್ಟಾಂಪ್‘ ಯೋಜನೆಯಡಿ ಫೋಟೊ ಸಹಿತ ಅಂಚೆ ಚೀಟಿಯನ್ನು ಖರೀದಿಸಿದ್ದಾನೆ. ಅದನ್ನು ಇಲಾಖೆ ಬಿಡುಗಡೆ ಮಾಡಿದೆ. 

ಈ ವಿಚಾರದಲ್ಲಿ ತಪ್ಪಿತಸ್ಥರಾಗಿರುವ ಅಂಚೆ ಚೀಟಿ ವಿಭಾಗದ ಉಸ್ತುವಾರಿ ರಜನೀಶ್ ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದ ವರ್ಮಾ, ‘ಕೆಲವು ನೌಕರರಿಗೆ ‌ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಇಲಾಖೆಯ ಕೆಲವು ಸಿಬ್ಬಂದಿಗೆ ಶೋಕಾಸ್ ನೊಟೀಸ್ ನೀಡಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಇಂತ ತಪ್ಪು ಪುನಾರವರ್ತನೆಯಾಗದಂತೆ ಮಾಡಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com