ಹಿಂದೂಪರ ಸಂಘಟನೆಯಿಂದ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಬೆದರಿಕೆ: ಗಾಂಧಿ ಕುರಿತಾದ ಭಾಷಣ ರದ್ದು- ತುಷಾರ್ ಗಾಂಧಿ 

ಮಹಾತ್ಮ ಗಾಂಧಿ ಕುರಿತಾದ ವಿಚಾರ ಸಂಕಿರಣಕ್ಕೆ ತಮ್ಮನ್ನು ಆಹ್ವಾನಿಸಿದ್ದರಿಂದ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಹಿಂದೂಪರ ಸಂಘಟನೆಯೊಂದು ಕಾಲೇಜಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ  ತಮ್ಮ ಭಾಷಣವನ್ನು ರದ್ದುಪಡಿಸಲಾಗಿದೆ ಎಂದು  ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಆರೋಪಿಸಿದ್ದಾರೆ.
ಗಾಂಧಿ ಮೊಮ್ಮಗ ತುಷಾರ್ ಗಾಂಧಿ
ಗಾಂಧಿ ಮೊಮ್ಮಗ ತುಷಾರ್ ಗಾಂಧಿ

ಪುಣೆ: ಮಹಾತ್ಮ ಗಾಂಧಿ ಕುರಿತಾದ ವಿಚಾರ ಸಂಕಿರಣಕ್ಕೆ ತಮ್ಮನ್ನು ಆಹ್ವಾನಿಸಿದ್ದರಿಂದ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಹಿಂದೂಪರ ಸಂಘಟನೆಯೊಂದು ಕಾಲೇಜಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ  ತಮ್ಮ ಭಾಷಣವನ್ನು ರದ್ದುಪಡಿಸಲಾಗಿದೆ ಎಂದು  ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೊಮ್ಮಗ ತುಷಾರ್ ಗಾಂಧಿ ಆರೋಪಿಸಿದ್ದಾರೆ.

ಆದಾಗ್ಯೂ, ನಿಗದಿಯಂತೆ ವಿಚಾರ ಸಂಕಿರಣ ನಡೆದಿದೆ ಎಂದು ಕಾಲೇಜ್ ಆಡಳಿತ ಮಂಡಳಿ ಹೇಳಿದೆ. ಒಂದು ವೇಳೆ ತುಷಾರ್ ಗಾಂಧಿ ಕಾರ್ಯಕ್ರಮಕ್ಕೆ ಬಂದರೆ ಪ್ರತಿಭಟನೆ ಮಾಡುವುದಾಗಿ ಕೆಲ ವಿದ್ಯಾರ್ಥಿಗಳು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ತುಷಾರ್ ಗಾಂಧಿ ಭಾಷಣವನ್ನು ರದ್ದುಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಯಾರೊಬ್ಬರು ರಾಜಕೀಯ ಹೇಳಿಕೆ ನೀಡದ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಲೇಜ್ ಆಡಳಿತ ಮಂಡಳಿ ಹೇಳಿದೆ.

ಸಾವಿತ್ರಿ ಬಾಯಿ ಪುಲೆ ಪುಣೆ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾರ್ಡನ್ ಕಾಲೇಜ್ ನಲ್ಲಿ ಗಾಂಧಿ ಮರು ಭೇಟಿ ವಿಷಯ ಕುರಿತ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ತುಷಾರ್ ಗಾಂಧಿ ಮತ್ತು ಗಾಂಧಿವಾದಿ ಅನ್ವರ್ ರಾಜನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. 

ನನನ್ನು ಆಹ್ವಾನಿಸಿದ್ದರಿಂದ ಇಂದು ನಡೆಯಬೇಕಿದ್ದ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮವನ್ನು ಮಾರ್ಡನ್ ಕಾಲೇಜ್ ರದ್ದುಪಡಿಸಿದೆ . ಒಂದು ವೇಳೆ ನಾನು ಬಂದರೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಪತಿತ್ ಪವನ್ ಸಂಸ್ಥೆ ಬೆದರಿಕೆ ಹಾಕಿದೆ ಎಂದು ತುಷಾರ್ ಗಾಂಧಿ ಟ್ವೀಟ್ ಮಾಡಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com