ದೆಹಲಿ: ಚುನಾವಣಾ ಫಲಿತಾಂಶದ ಆಧಾರದ ಮೇಲೆ ಕಾಂಗ್ರೆಸ್ -ಎಎಪಿ ಮೈತ್ರಿ ಸಾಧ್ಯತೆ- ಪಿ ಸಿ ಚಾಕೋ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ಬೆನ್ನಲ್ಲೇ  ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಸಾಧ್ಯತೆ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಪಿ ಸಿ ಚಾಕೋ ಹೇಳಿದ್ದಾರೆ. 
ಕಾಂಗ್ರೆಸ್ ಮುಖಂಡ ಪಿ. ಸಿ. ಚಾಕೋ
ಕಾಂಗ್ರೆಸ್ ಮುಖಂಡ ಪಿ. ಸಿ. ಚಾಕೋ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ಬೆನ್ನಲ್ಲೇ  ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಸಾಧ್ಯತೆ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಪಿ ಸಿ ಚಾಕೋ ಹೇಳಿದ್ದಾರೆ. 

ಚುನಾವಣಾ ಫಲಿತಾಂಶದ ಆಧಾರದ ಕಾಂಗ್ರೆಸ್- ಆಮ್ ಆದ್ಮಿ  ಮೈತ್ರಿ ನಿರ್ಧಾರ ಅವಲಂಬನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ - ಎಎಪಿ ಮೈತ್ರಿ ಫೆಬ್ರವರಿ 11 ರಂದು ಹೊರಬರಲಿರುವ ಚುನಾವಣಾ ಫಲಿತಾಂಶವನ್ನು ಅವಲಂಬಿಸಿದೆ. ಯಾವುದೇ ಅಂಶವನ್ನು ಊಹಿಸಲು ಸಾಧ್ಯವಿಲ್ಲ. ಫಲಿತಾಂಶ ಬಂದ ನಂತರ ಅದರ ಬಗ್ಗೆ ಯೋಚನೆ ಅಥವಾ ಚರ್ಚೆ ಮಾಡಲು ಸಾಧ್ಯ. ಆದಷ್ಟು ಬೇಗ ಅದು ನಡೆಯಲಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ಈ ಮಧ್ಯೆ ಸಮೀಕ್ಷೆಗಳು ಸುಳ್ಳು ಎಂದು ಹೇಳಿದ ಅವರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಸಮೀಕ್ಷೆಗಳು ಊಹಿಸಿರುವಂತೆ ಕಾಂಗ್ರೆಸ್ ಶೂನ್ಯಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಚುನಾವಣಾ ಸಮೀಕ್ಷೆಗಳು ಯಾವಾಗಲೂ ನಿಜವಾಗಿರುವುದಿಲ್ಲ ಎಂಬುದು ಛತ್ತೀಸ್ ಗಡ ಹಾಗೂ ಜಾರ್ಖಂಡ್ ಚುನಾವಣೆಯಲ್ಲಿ ದೃಢಪಟ್ಟಿದ್ದು, ಸಮೀಕ್ಷೆಗಳು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com