ಏಪ್ರಿಲ್‌ನಲ್ಲಿ ನೂತನ ಪಕ್ಷ ಪ್ರಾರಂಭಿಸಲಿರುವ ಸೂಪರ್ ಸ್ಟಾರ್ ರಜನಿಕಾಂತ್ 

ದಕ್ಷೀಣ ಭಾರತ ಚಿತ್ರರಂಗದ ಮೇರುನಟ ರಜನಿಕಾಂತ್ ಏಪ್ರಿಲ್‌ನಲ್ಲಿ ತಮ್ಮ ನೂತನ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ.  ಡಿಸೆಂಬರ್ 31, 2017 ರಂದು ರಜಿನಿ ಮಕ್ಕಳ್ ಮಂದ್ರಮ್ ನ ಘೋಷಣೆಯಾದ ಸುಮಾರು ಎರಡು ವರ್ಷಗಳ ನಂತರ ನಟ ಹಾಗೂ ಅವರ ನಿಕಟವರ್ತಿಗಳು ಏಪ್ರಿಲ್ ಗೆ ನೂತನ ಪಕ್ಷ ಪ್ರಾರಂಭಿಸುವುದಾಗಿ ಖಚಿತಪಡಿಸಿದ್ದಾರೆ.
ರಜನಿಕಾಂತ್

ಇನ್ನೂ ಪಕ್ಷದ ಹೆಸರು ಘೋಷಣೆಯಾಗಿಲ್ಲವಾದರೂ  ರಜಿನಿ ಮಕ್ಕಳ್ ಮಂದ್ರಮ್ ನ ಉನ್ನತ ಪದಾಧಿಕಾರಿ ಹೇಳಿದಂತೆ ಏಪ್ರಿಲ್ 14 ರ ನಂತರ ಯಾವುದೇ ಸಮಯದಲ್ಲಿ ಪಕ್ಷದ ಘೋಷಣೆಯಾಗುವ ಸಾಧ್ಯತೆ ಇದೆ.

ರಜನಿಕಾಂತ್ ರಾಜಕೀಯವಾಗಿ ಬಿಜೆಪಿಯತ್ತ ವಾಲುತ್ತಿದ್ದಾರೆ ಮತ್ತು ಚೆನ್ನೈ ಮೂಲದ ಆರ್‌ಎಸ್‌ಎಸ್ ಮುಖಂಡ ಎಸ್ ಗುರುಮೂರ್ತಿಯಿಂದ ಪ್ರಭಾವಿತರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು ತಮಿಳಾರುವಿ ಮಣಿಯನ್ ರಾಜಕೀಯ ತಂತ್ರಮತ್ತು ದಿನನಿತ್ಯದ ವ್ಯವಹಾರಗಳಲ್ಲಿ ನಟನಿಗೆ ಮಾರ್ಗದರ್ಶಕನ  ಮಾಡುತ್ತಿದೆ ಎನ್ನಲಾಗಿದೆ.

ರಜನಿಕಾಂತ್ ಅವರ  ಸಮೀಪವರ್ತಿಗಳ ಹೇಳಿಕೆಯಂತೆ ನಟನು ಈ ಬಗೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲು ಬಿಜೆಪಿ ಖಚಿತವಾಗಿ ಸಹಾಯ ಮಾಡಲಿದೆ. ಬಿಜೆಪಿ ರಜನಿ ಪಕ್ಷದೊಡನೆ ಮೈತ್ರಿ ಮಾಡಿಕೊಳ್ಳಬಹುದು ಅಥವಾ ಮಾಡಿಕೊಳ್ಲದಿರಬಹುದು ಆದರೆ ನಟನಿಗೆ ಕಮಲ ಪಕ್ಷ ಖಚಿತವಾಗಿ ನೆರವಾಗಲಿದೆ.ಡಿಎಂಕೆಯನ್ನು ತಮಿಳುನಾಡಿನಲ್ಲಿ ಸೋಲಿಸುವ ಕನಸು ಹೊಂದಿರುವ ರಜನಿಗೆ ಕೇಸರಿ ಪಾಳಯದ ನೆರವು ಸಿಗಲಿದೆ ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com