ಸರ್ಕಾರಿ ಶಾಲಾ ಶಿಕ್ಷಕರು ವಿದೇಶಿ ಭಾಷೆಗಳನ್ನು ಕಲಿಯಬೇಕು: ಯೋಗಿ ಆದಿತ್ಯನಾಥ್

ಸರ್ಕಾರಿ ಶಾಲಾ ಶಿಕ್ಷಕರು ವಿದೇಶಿ ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Published: 11th February 2020 04:12 PM  |   Last Updated: 11th February 2020 04:13 PM   |  A+A-


yogi adithyanath

ಯೋಗಿ ಆದಿತ್ಯನಾಥ್

Posted By : Shilpa D
Source : IANS

ಲಕ್ನೋ: ಸರ್ಕಾರಿ ಶಾಲಾ ಶಿಕ್ಷಕರು ವಿದೇಶಿ ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಭಾರತದ ಶಿಕ್ಷಕರಿಗೆ ಪ್ರಪಂಚದಾದ್ಯಂತ ತುಂಬಾ ಬೇಡಿಕೆಯಿದೆ, ಹೀಗಾಗಿ ನಮ್ಮ ಶಿಕ್ಷಕರು ವಿದೇಶಗಳಲ್ಲಿ ಕೆಲಸ ಪಡೆಯಬೇಕಾರೇ ವಿದೇಶಿ ಭಾಷೆಗಳನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

ಬೋಧನಾ ಸಿಬ್ಬಂದಿಯಲ್ಲಿ ಗುಣಾತ್ಮಕ ಸುಧಾರಣೆಯಾಗಲು ಸಾಧ್ಯವಾಗುವಂತೆ ದೇಶದಲ್ಲಿ ಶಿಕ್ಷಕರ ಅರ್ಹತೆಗಳನ್ನು ಉನ್ನತೀಕರಣಗೊಳಿಸಲು ಪ್ರಯತ್ನಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. 

ಎಲ್ಲಾ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಅಗತ್ಯವಿರುವ ದೇಶಗಳನ್ನು ಗುರುತಿಸಬೇಕು ಮತ್ತು ಅವರಿಗೆ ಈ ದೇಶಗಳಲ್ಲಿ ಅಗತ್ಯವಿರುವ ಭಾಷೆಗಳನ್ನು ಕಲಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಗುರುತಿಸಲಾದ ಭಾಷೆಗಳನ್ನು ಪಠ್ಯಕ್ರಮದ ಒಂದು ಭಾಗವಾಗಿ ಕಲಿಸಬಹುದಾಗಿದೆ ಎಂದು ಅವರು ಹೇಳಿದರು.

ಉತ್ತರ ಪ್ರದೇಶದ  ಮೂಲ ಶಿಕ್ಷಣ ಮಂಡಳಿಯು ನಡೆಸಿದ ಪದವೀಧರ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಸುಮಾರು ಶೇ. 70 ರಷ್ಟು  ಹೆಚ್ಚಿನ ಸಂಖ್ಯೆಯ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.  ಶಿಕ್ಷಕರ ಗುಣಮಟ್ಟಕ್ಕೆ ವಿಶೇಷ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp