ಕರೋನಾ ವೈರಸ್: ಪ್ರತ್ಯೇಕವಾಗಿ ಇರಿಸಿದರೂ ಪುಣೆ ವೈದ್ಯರ ಸಹಾಯಕ್ಕೆ ಮನಸೋತ ಚೀನಾ ಪ್ರಜೆ!

ಕರೋನಾ ವೈರಸ್ ಸೋಂಕು ತಗುಲಿರುವ ಲಕ್ಷಣ ಕಾಣಿಸಿಕೊಂಡಿದ್ದ ಚೀನಾ ಪ್ರಜೆಯೊಬ್ಬರು ಭಾರತೀಯ ವೈದ್ಯರ ಸಹಾಯಕ್ಕೆ ಮನಸೋತು ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. 
ಕರೋನಾ ವೈರಸ್: ಪ್ರತ್ಯೇಕವಾಗಿ ಇರಿಸಿದರೂ ಪುಣೆ ವೈದ್ಯರ ಸಹಾಯಕ್ಕೆ ಮನಸೋತ ಚೀನಾ ಪ್ರಜೆ!
ಕರೋನಾ ವೈರಸ್: ಪ್ರತ್ಯೇಕವಾಗಿ ಇರಿಸಿದರೂ ಪುಣೆ ವೈದ್ಯರ ಸಹಾಯಕ್ಕೆ ಮನಸೋತ ಚೀನಾ ಪ್ರಜೆ!

ಪುಣೆ: ಕರೋನಾ ವೈರಸ್ ಸೋಂಕು ತಗುಲಿರುವ ಲಕ್ಷಣ ಕಾಣಿಸಿಕೊಂಡಿದ್ದ ಚೀನಾ ಪ್ರಜೆಯೊಬ್ಬರು ಭಾರತೀಯ ವೈದ್ಯರ ಸಹಾಯಕ್ಕೆ ಮನಸೋತು ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. 

ಚೀನಾ ಪ್ರಜೆಯನ್ನು ಪುಣೆಯ ನಾಯ್ಡು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಈ ಬಗ್ಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಟ್ವೀಟ್ ಮಾಡಿದ್ದು:  ಎಲ್ಲರ ಆರೈಕೆ!! ಕರೋನಾ ವೈರಸ್ (2019-nCoV) ರೋಗಲಕ್ಷಣಗಳಿದ್ದ ಚೀನಾ ಪ್ರಜೆಯೊಬ್ಬರನ್ನು ಪುಣೆಯಲ್ಲಿರುವ ನಾಯ್ಡು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಇದು ಚೀನಾ ಪ್ರಜೆಯೊಬ್ಬರ ಅಂತರಂಗ ಎಂದು ಆ ವ್ಯಕ್ತಿ ಬರೆದಿದ್ದ ಪತ್ರವನ್ನೂ ಟ್ಯಾಗ್ ಮಾಡಿದೆ. 

ಆ ಪತ್ರ ಹೀಗಿತ್ತು: ಇಲ್ಲಿಗೆ ನನ್ನನ್ನು ಏಕಾ ಏಕಿ ಕಳುಹಿಸಲಾಗಿತ್ತು. ಸೌಲಭ್ಯ ಹಾಗು ಭಾಷಾ ಸಮಸ್ಯೆಗಳ ಕಾರಣದಿಂದಾಗಿ ಸ್ವಲ್ಪ ಭಯವಾಗಿತ್ತು. ಆದರೆ ಚೀನಾ ಜನತೆಗೆ ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ಸಹಕಾರಿಯಾಗಿದ್ದರು. ಆಹಾರ, ಸ್ವಚ್ಛತೆ ಎಲ್ಲಾ ಅಂಶಗಳನ್ನೂ ಉತ್ತಮವಾಗಿ ನಿರ್ವಹಣೆ ಮಾಡಲಾಗಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com