ಟ್ರಂಪ್ ಭಾರತ ಪ್ರವಾಸ: ಅಹಮದಾಬಾದ್ ನಲ್ಲಿ ಸ್ಲಂ ಗಳು ಕಾಣದಂತೆ ಗೋಡೆ ನಿರ್ಮಾಣ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24 ರಿಂದ ಭಾರತ ಪ್ರವಾಸದಲ್ಲಿರಲಿದ್ದಾರೆ. ಟ್ರಂಪ್ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಸಂಚರಿಸುವ ಮಾರ್ಗದಲ್ಲಿ ಸ್ಲಂ ಗಳು ಕಾಣದಂತೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. 

Published: 14th February 2020 02:27 PM  |   Last Updated: 14th February 2020 02:27 PM   |  A+A-


Trump in India: Ahmedabad municipal body builds wall to hide slums from US President's view

ಟ್ರಂಪ್ ಭಾರತ ಪ್ರವಾಸ: ಅಹಮದಾಬಾದ್ ನಲ್ಲಿ ಸ್ಲಂ ಗಳು ಕಾಣದಂತೆ ಗೋಡೆ ನಿರ್ಮಾಣ

Posted By : Srinivas Rao BV
Source : The New Indian Express

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ.24 ರಿಂದ ಭಾರತ ಪ್ರವಾಸದಲ್ಲಿರಲಿದ್ದಾರೆ. ಟ್ರಂಪ್ ಗುಜರಾತ್ ನ ಅಹಮದಾಬಾದ್ ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಸಂಚರಿಸುವ ಮಾರ್ಗದಲ್ಲಿ ಸ್ಲಂ ಗಳು ಕಾಣದಂತೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. 

ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಬ್ರಿಡ್ಜ್ ಗೆ ಸಂಪರ್ಕ ಕಲ್ಪಿಸುವ ಮಾರ್ಗದ ಇಕ್ಕೆಲಗಳಲ್ಲಿ ಸುಮಾರು 600 ಮೀಟರ್ ಉದ್ದಕ್ಕೂ 6-7 ಅಡಿ ಎತ್ತರದ ಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 

ನಗರದ ಸೌಂದರೀಕರಣದ ಭಾಗವಾಗಿ ಈ ಕಾಮಗಾರಿ ನಡೆಸಲಾಗುತ್ತಿದೆ. ಗೋಡೆ ನಿರ್ಮಾಣದ ಜೊತೆಗೆ ಎಎಂಸಿಯಿಂದ ಪೂರ್ತಿ ಪ್ರಮಾಣದಲ್ಲಿ ಬೆಳೆದಿರುವ ಖರ್ಜೂರ ಮರಗಳನ್ನು ನೆಡಲಾಗುತ್ತಿದೆ. 

2017 ರಲ್ಲಿ ಭಾರತ-ಜಪಾನ್ ಶೃಂಗಸಭೆ ನಡೆದಿದ್ದಾಗ ಜಪಾನ್ ಪ್ರಧಾನಿ ಶಿಂಜೋ ಅಬೆ ಆಗಮದ ಹಿನ್ನೆಲೆ ಇದೇ ಮಾದರಿಯಲ್ಲಿ ಸೌಂದರೀಕರಣ ಮಾಡಲಾಗಿತ್ತು.
 

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp