ಕಾಶ್ಮೀರಕ್ಕೆ ಪ್ರತ್ಯೇಕ ಸೇನಾಪಡೆ: ಸಶಸ್ತ್ರ ಪಡೆಗಳಲ್ಲಿ ಬದಲಾವಣೆ ತರುವ ಯತ್ನ ಆರಂಭಿಸಿದ ರಾವತ್

ಸಶಸ್ತ್ರಪಡೆಯ 3 ಅಂಗಗಳಿಗೆ ಏಕೀಕೃತ ಮುಖ್ಯಸ್ಥನಾಗಿ ನೇಮಕವಾದ ಬೆನ್ನಲ್ಲೇ ಜನರಲ್ ಬಿಪಿನ್ ರಾವತ್ ಅವರು ಸೇನೆ, ನೌಕಾಪಡೆ ಹಾಗೂ ವಾಯುಪಟೆಗಳಲ್ಲಿ ಭಾರೀ ಬದಲಾವಣೆ ತರುವ ಯತ್ನಗಳಿಗೆ ಕೈಹೈಕಿದ್ದಾರೆ. 
ಬಿಪಿನ್ ರಾವತ್
ಬಿಪಿನ್ ರಾವತ್

ನವದೆಹಲಿ: ಸಶಸ್ತ್ರಪಡೆಯ 3 ಅಂಗಗಳಿಗೆ ಏಕೀಕೃತ ಮುಖ್ಯಸ್ಥನಾಗಿ ನೇಮಕವಾದ ಬೆನ್ನಲ್ಲೇ ಜನರಲ್ ಬಿಪಿನ್ ರಾವತ್ ಅವರು ಸೇನೆ, ನೌಕಾಪಡೆ ಹಾಗೂ ವಾಯುಪಟೆಗಳಲ್ಲಿ ಭಾರೀ ಬದಲಾವಣೆ ತರುವ ಯತ್ನಗಳಿಗೆ ಕೈಹೈಕಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿನ ಸೇನಾ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಕಮಾಂಡ್ ಸ್ಥಾಪಿಸುವ ಚಿಂತನೆ ನಡೆದಿದೆ. ಇದೇ ವೇಳೆ 2021ರ ವೇಳೆಗೆ ನೌಕಾ ಪಡೆಯ ಪೂರ್ವಕ ಹಾಗೂ ಪಶ್ಚಿಮ ಕಮಾಂಡ್ ವಿಲೀನಗೊಳಿಸಿ ಪ್ರತ್ಯೇಕ ಪರ್ಯಾಯ ದ್ವೀಪ ಕಮಾಂಡ್ ಸ್ಥಾಪಿಸಲಾಗುತ್ತದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಂಗಾಳ ಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ನೌಕಾಪಡೆ ಕಮಾಂಡ್ಗಳಿವೆ. ಇವುಗನ್ನು ವಿಲೀನಗೊಳಿಸಿ ಪೆನಿನ್ಸುಲರ್ ಕಮಾಂಡ್ ಸ್ಥಾಪಿಸಲಾಗುತ್ತದೆ. ಪೆನಿನ್ಸುಲರ್ ಕಮಾಂಡ್ ಅರಬ್ಬೀ ಸಮುದ್ರ. ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾ ಸಾಗರದ ಮೇಲೆ ನಿಗಾ ಇಡುವ ಏಕೈಕ ಕಮಕಾಂಡ್ ಆಗಲಿದೆ. ಇದಕ್ಕಾಗಿ ಮಾರ್ಚ್ 31ರೊಳಗೆ ಅಧ್ಯಯನ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು ತಿಳಿಸಿದರು. 

ಉಗ್ರ ಚಟುವಟಿಕೆ ಹೆಚ್ಚಿರುವ ಜಮ್ಮು ಮತ್ತು ಕಾಶ್ಮೀರಕ್ಕೆಂದೇ ಪ್ರತ್ಯೇಕ ಸಮಗ್ರ ಕಮಾಂಡ್ ಸ್ಥಾಪಿಸುವ ಚರ್ಚೆ ನಡೆದಿದೆ. ಇನ್ನು ಚೀನಾ ಬೆದರಿಕೆ ಎದುರಿಸಲು ಪ್ರತ್ಯೇಕ ಚೀನಾ ಕಮಾಂಡ್ ಅಗತ್ಯವಿದೆ ಎಂದರು. ನೌಕಾಪಡೆಗೆ ಯುದ್ಧವಿಮಾನ ವಾಹಕ ಹಡುಗುಗಳಿಗಿಂತ ಜಲಾಂತರ್ಗಾಮಿಗಳ ಅಗತ್ಯವಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com