ರಾಷ್ಟ್ರೀಯತೆ, 'ಭಾರತ್ ಮಾತಾ ಕಿ ಜೈ' ಘೋಷಣೆ ದುರ್ಬಳಕೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ರಾಷ್ಟ್ರೀಯತೆ ಹಾಗೂ 'ಭಾರತ್ ಮಾತಾ ಕಿ ಜೈ' ಘೋಷಣೆಯನ್ನು ಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

Published: 23rd February 2020 07:34 AM  |   Last Updated: 23rd February 2020 07:34 AM   |  A+A-


Manmohan Singh

ಮಾಜಿ ಪ್ರಧಾನಿ ಮನಮೋಹನ್ ಸಿಂಗ್

Posted By : Manjula VN
Source : The New Indian Express

ನವದೆಹಲಿ: ರಾಷ್ಟ್ರೀಯತೆ ಹಾಗೂ 'ಭಾರತ್ ಮಾತಾ ಕಿ ಜೈ' ಘೋಷಣೆಯನ್ನು ಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಜರುಗಿದ ನೆಹರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಜಗತ್ತಿನ ಪ್ರಮುಖ ದೇಶ ಎಂದು, ಗುರುತಿಸಲು ಮೂಲ, ಮುಖ್ಯ ಕಾರಣ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಎಂದೂ ಒತ್ತಿ ಹೇಳಿದರು.

ದೇಶಕ್ಕೆ ನೆಹರೂ ಅವರದ್ದೇ ನಾಯಕತ್ವ ಇದ್ದಿದ್ದರೆ, ಭಾರತಕ್ಕೆ ಇಂತಹ ಗತಿ ಬರುತ್ತಿರಲಿಲ್ಲ ಎಂದು ಅವರು ತಿಳಿಸಿದರು.ದುರ ದೃಷ್ಟವೆಂದರೆ, ಒಂದು ವರ್ಗದ ಜನರಿಗೆ ಇತಿಹಾಸ ಓದುವ, ಸತ್ಯ ಅರಿಯುವ ತಾಳ್ಮೆ , ವ್ಯವದಾನ ಎರಡೂ ಇಲ್ಲ. ಬದಲಿಗೆ ನೆಹರೂ ಅವರನ್ನು ತಪ್ಪಾಗಿ ಬಿಂಬಿಸಿ ಖಳನಾಯಕನನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿಂಗ್ ಕಿಡಿಕಾರಿದರು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp