ದೆಹಲಿ ಹಿಂಸಾಚಾರ: ಆ್ಯಪ್ ಬಳಸಿ ಆರ್'ಟಿಒ ಮೂಲಕ ಮಾಹಿತಿ ಪಡೆದು ದಾಳಿ ನಡೆಸುತ್ತಿದ್ದ ದುಷ್ಕರ್ಮಿಗಳು!

ತಂತ್ರಜ್ಞಾನವನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ದೆಹಲಿ ಸಾಕ್ಷಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ತಮ್ಮ ಮೊಬೈಲ್ ನಲ್ಲಿ ಆ್ಯಪ್ ಬಳಕೆ ಮಾಡಿಕೊಂಡು ಆರ್'ಟಿಒ ಮೂಲಕ ಸಮುದಾಯಗಳ ತಿಳಿದು ಜನರ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 
ದೆಹಲಿ ಹಿಂಸಾಚಾರ
ದೆಹಲಿ ಹಿಂಸಾಚಾರ

ಹೈದರಾಬಾದ್: ತಂತ್ರಜ್ಞಾನವನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ದೆಹಲಿ ಸಾಕ್ಷಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ತಮ್ಮ ಮೊಬೈಲ್ ನಲ್ಲಿ ಆ್ಯಪ್ ಬಳಕೆ ಮಾಡಿಕೊಂಡು ಆರ್'ಟಿಒ ಮೂಲಕ ಸಮುದಾಯಗಳ ತಿಳಿದು ಜನರ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 

ಪ್ರತಿಭಟನೆ ವೇಳೆ ಸ್ಥಳದಲ್ಲಿರುತ್ತಿದ್ದ ವಾಹನಗಳ ಸಂಖ್ಯೆಯನ್ನು ಆ್ಯಪ್ ನಲ್ಲಿ ಹುಡುಕಿ ವಾಹನದ ಮಾಲೀಕರ ಮಾಹಿತಿ ತಿಳಿದುಕೊಂಡು ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ. 

ವಾಹನಗಳ ಮಾಹಿತಿ ತಿಳಿದುಕೊಳ್ಳಲು ಗೂಗಲ್ ಪ್ಲೇಸ್ಟೋರ್ನಲ್ಲಿ ಉಚಿತ ಆ್ಯಪ್ ಗಳು ಲಭ್ಯವಿದ್ದು, ಈ ಅ್ಯಪ್ ಗಳ ಮೂಲಕ ವಾಹನದ ಸಂಖ್ಯೆಯನ್ನು ನಮೂದಿಸಿದರೆ, ವಾಹನದ ಮಾಲೀಕರ ಮಾಹಿತಿ ಸುಲಭವಾಗಿ ಸಿಗುತ್ತದೆ. ಇದಲ್ಲದೆ ಬಳಕೆದಾರರಿಗೆ ಸುಲಭವಾಗಲು ಮತ್ತಷ್ಟು ಆ್ಯಪ್ ಗಳೂ ಲಭ್ಯವಿದ್ದು, ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿದರೂ ಕೂಡ ವಿವರಗಳು ಲಭ್ಯವಾಗಲಿವೆ. ಆದರೆ, ಈ ಆ್ಯಪ್ ಬಳಕೆಗೆ ಹಣನನ್ನು ವ್ಯಯಿಸಬೇಕಾಗಿರುತ್ತದೆ. 

ಗೂಗಲ್ ಪ್ಲೇಸ್ಟೋರ್ ನಲ್ಲಿ ದೊರಕುವ ಈ ಅಸಂಖ್ಯಾತ ಅಪ್ಲಿಕೇಶನ್ ಗಳು ಡೇಟಾ ಕ್ರಾಲಿಂಗ್ ಮೂಲಕ ಕಾನೂನು ಬಾಹಿರವಾಗಿ ಡೇಟಾವನ್ನು ಪಡೆದುಕೊಂಡಿದೆ. ಈ ವಿಧಾನವು ಡೇಟಾವನ್ನು ಸಂಗ್ರಹಿಸಲು ಇಂರ್ಟನೆಟ್ ಬೋಟ್ ನ್ನು ಸ್ವಯಂಚಾಲಿತವಾಗಿ ನೆಟ್ ಬ್ರೌಸ್ ಮಾಡಲು ಅನುಮತಿ ನೀಡುತ್ತವೆ ಎಂದು ಭದ್ರತಾ ಸಂಶೋಧಕ ಶ್ರೀನಿವಾಸ್ ಕೊಡಾಲಿ ಹೇಳಿದ್ದಾರೆ. 

ವಿಚಾರ ಗಂಭೀರವಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮೂಲಕ ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಕಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com