ದೆಹಲಿ ಹಿಂಸಾಚಾರಕ್ಕೆ ಎಎಪಿ-ಕಾಂಗ್ರೆಸ್ ನಾಯಕರ ಹೇಳಿಕೆ ಕಾರಣ: ಬಿಜೆಪಿ ಆರೋಪ

ಕಾಂಗ್ರೆಸ್ ಮತ್ತು ಎಎಪಿ, ರಾಷ್ಟ್ರ ರಾಜಧಾನಿಯಲ್ಲಿನ ಹಿಂಸಾಚಾರವನ್ನು "ರಾಜಕೀಯಗೊಳಿಸುತ್ತಿವೆ" ಎಂದು ಗುರುವಾರ ಆರೋಪಿಸಿರುವ ಬಿಜೆಪಿ, ಈ ಹಿಂಸಾತ್ಮಕ ಘರ್ಷಣೆಗೆ ಉಭಯ ಪಕ್ಷಗಳ ನಾಯಕರ ಪ್ರಚೋದನಕಾರಿ ಹೇಳಿಕೆಗಳೇ ಕಾರಣವೆಂದು ಆರೋಪಿಸಿದೆ.
ದೆಹಲಿ ಹಿಂಸಾಚಾರ
ದೆಹಲಿ ಹಿಂಸಾಚಾರ

ನವದೆಹಲಿ: ಕಾಂಗ್ರೆಸ್ ಮತ್ತು ಎಎಪಿ, ರಾಷ್ಟ್ರ ರಾಜಧಾನಿಯಲ್ಲಿನ ಹಿಂಸಾಚಾರವನ್ನು "ರಾಜಕೀಯಗೊಳಿಸುತ್ತಿವೆ" ಎಂದು ಗುರುವಾರ ಆರೋಪಿಸಿರುವ ಬಿಜೆಪಿ, ಈ ಹಿಂಸಾತ್ಮಕ ಘರ್ಷಣೆಗೆ ಉಭಯ ಪಕ್ಷಗಳ ನಾಯಕರ ಪ್ರಚೋದನಕಾರಿ ಹೇಳಿಕೆಗಳೇ ಕಾರಣವೆಂದು ಆರೋಪಿಸಿದೆ.

ಇಂದಿಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ  ಪ್ರಕಾಶ್ ಜಾವಡೇಕರ್, ದೆಹಲಿ ಹಿಂಸಾಚಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ. ಎಎಪಿ ಈ ವಿಷಯವನ್ನು ಕೋಮುವಾದೀಕರಿಸಿದೆ ಎಂದು ಆರೋಪಿಸಿದರು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿನ ಹಿಂಸಾಚಾರಕ್ಕೆ ಸದ್ಯ 37 ಮಂದಿ ಬಲಿಯಾಗಿದ್ದಾರೆ. ಪ್ರಸ್ತುತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸದ್ಯ ಹೆಚ್ಚುವರಿ ಪೊಲೀಸ್ ತುಕಡಿ ಮತ್ತು ಭದ್ರತಾ ಪಡೆಯನ್ನು ನಿಯೋಜಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com