ಹೊಸ ವರ್ಷದ ದಿನ 67,385 ಮಕ್ಕಳ ಜನನ, ಜಾಗತಿಕ ದಾಖಲೆ ನಿರ್ಮಿಸಿದ ಭಾರತ!

ಹೊಸ ವರ್ಷದ ಮೊದಲ ದಿನ ವಿಶ್ವದಾದ್ಯಂತ ಜನಿಸಿದ ಮಕ್ಕಳ ಸಂಖ್ಯೆಯಲ್ಲಿ ಭಾರತದ ಪಾಲು ಅತಿ ಹೆಚ್ಚಿನದಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಯುನೈಟೆಡ್ ನೇಷನ್ಸ್: ಹೊಸ ವರ್ಷದ ಮೊದಲ ದಿನ ವಿಶ್ವದಾದ್ಯಂತ ಜನಿಸಿದ ಮಕ್ಕಳ ಸಂಖ್ಯೆಯಲ್ಲಿ ಭಾರತದ ಪಾಲು ಅತಿ ಹೆಚ್ಚಿನದಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.

 ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಆ ದಿನ 67,385ಮಕ್ಕಳು ಜನಿಸಿದ್ದವು. ವಿಶ್ವದಾದ್ಯಂತ ಇದೇ ದಿನ ಸುಮಾರು 400,000  ಮಕ್ಕಳ ಜನನವಾಗಿದೆ.

ಹೊಸ ವರ್ಷದ ದಿನದಂದು ವಿಶ್ವದಾದ್ಯಂತ ಅಂದಾಜು 392,078 ಶಿಶುಗಳು ಜನಿಸಿವೆ ಎಂದು ಯುನಿಸೆಫ್ ತಿಳಿಸಿದೆ.ದರಲ್ಲಿ, ಅಂದಾಜು 67,385 ಶಿಶುಗಳು ಭಾರತದಲ್ಲಿ ಜನಿಸಿದ್ದು, ಜಾಗತಿಕವಾಗಿ ಇದು ಹೆಚ್ಚಿನ ಪ್ರಮಾಣವಾಗಿದೆ. 46,299 ಜನನಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.

ಜನಿಸಿದ ಶಿಶುಗಳು ವಿಶ್ವದ ಪ್ರಸ್ತುತ ಜನಸಂಖ್ಯೆಯ ಸುಮಾರು 7.8 ಶತಕೋಟಿ ಜನಸಂಖ್ಯೆಯನ್ನು ಸೇರಲಿದೆ. ವಿಶ್ವಸಂಸ್ಥೆಯ ನಿರೀಕ್ಷೆಯ ಅನುಸಾರ ಜಗತ್ತಿನ ಜನಸಂಖ್ಯೆ  2100 ರ ಸುಮಾರಿಗೆ ಸುಮಾರು 11 ಬಿಲಿಯನ್ ತಲುಪಬಹುದು.

"ಹೊಸ ವರ್ಷ ಮತ್ತು ಹೊಸ ದಶಕದ ಆರಂಭವು ನಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲ, ನಮ್ಮ ನಂತರ ಬರುವವರ ಭವಿಷ್ಯವನ್ನೂ ನಿರ್ಧರಿಸುವ ಅವಕಾಶವಾಗಿದೆ"ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದರು.

ಫಿಜಿಯಲ್ಲಿ 2020ರ ಮೊದಲ ಮಗು ಜನಿಸಿದ್ದರೆ ಅಮೆರಿಕಾದಲ್ಲಿ ವರ್ಷದ ಮೊದಲ ದಿನದ ಕಡೇ ಮಗುವಿನ ಜನನವಾಗಿದೆ. ಜಾಗತಿಕವಾಗಿ, ಭಾರತ(67,385), ಚೀನಾ (46,299), ನೈಜೀರಿಯಾ (26,039), ಪಾಕಿಸ್ತಾನ (16,787), ಇಂಡೋನೇಷ್ಯಾ (13,020), ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (10,452) ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (10,247) ಮತ್ತು ಇಥಿಯೋಪಿಯಾ (8,493).ಗಳಲ್ಲಿ ಅತಿ ಹೆಚ್ಚು ಮಕ್ಕಳ ಜನನವಾಗಿದೆ. 

2019 ರಲ್ಲಿ 1.43 ಶತಕೋಟಿ ಜನರಿರುವ ಚೀನಾ, ಮತ್ತು 1.37 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತವು 2019 ರಲ್ಲಿ ಜಾಗತಿಕ ಒಟ್ಟು ಮೊತ್ತದಲ್ಲಿ ಕ್ರಮವಾಗಿ 19 ಮತ್ತು 18 ಶೇಕಡಾವನ್ನು ಒಳಗೊಂಡಿರುವ ವಿಶ್ವದ ಎರಡು ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾಗಿವೆ. ಶತಮಾನದ ಅಂತ್ಯದ ವೇಳೆಗೆ, ಭಾರತವು ಸುಮಾರು 1 ರೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com