ನೇಪಾಳ ಪ್ರಜೆಯಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್'ಪೋರ್ಟ್ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳು

ನೇಪಾಳ ಮೂಲದ ಪ್ರಜೆಗಳಂತೆ ಕಾಣುತ್ತಿದ್ದೀರಿ ಎಂದು ಕಾರಣ ನೀಡಿರುವ ಅಧಿಕಾರಿಗಳು, ಹರಿಯಾಣ ಮೂಲದ ಸಹೋದರಿಯರಿಬ್ಬರಿಗೆ ಪಾಸ್'ಪೋರ್ಟ್ ನಿರಾಕರಿಸಿರವ ಘಟನೆ ನಡೆದಿದೆ. 
ನೇಪಾಳ ಪ್ರಜೆಯಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್'ಪೋರ್ಟ್ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳು
ನೇಪಾಳ ಪ್ರಜೆಯಂತೆ ಕಾಣುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್'ಪೋರ್ಟ್ ಅರ್ಜಿ ತಿರಸ್ಕರಿಸಿದ ಅಧಿಕಾರಿಗಳು

ಅಂಬಾಲ: ನೇಪಾಳ ಮೂಲದ ಪ್ರಜೆಗಳಂತೆ ಕಾಣುತ್ತಿದ್ದೀರಿ ಎಂದು ಕಾರಣ ನೀಡಿರುವ ಅಧಿಕಾರಿಗಳು, ಹರಿಯಾಣ ಮೂಲದ ಸಹೋದರಿಯರಿಬ್ಬರಿಗೆ ಪಾಸ್'ಪೋರ್ಟ್ ನಿರಾಕರಿಸಿರವ ಘಟನೆ ನಡೆದಿದೆ. 

ಸಂತೋಷ್ ಹಾಗೂ ಸುಷ್ಮಾ ಎಂಬ ಇಬ್ಬರು ಸಹೋದರಿಯರು ಪಾಸ್'ಪೋರ್ಟ್'ಗೆ ಅರ್ಜಿಸಲ್ಲಿಸಿದ್ದರು. ಆದರೆ, ಪಾಸ್ ಪೋರ್ಟ್ ಕಚೇರಿಯ ಸಿಬ್ಬಂದಿ ಸಹೋದರಿಯರು ನೇಪಾಳ ಪ್ರಜೆಗಳಂತೆ ಕಾಣುತ್ತಿದ್ದಾರೆಂಬ ಕಾರಣ ನೀಡಿ ಅರ್ಜಿ ತಿರಸ್ಕರಿಸಿದ್ದಾರೆಂದು ವರದಿಗಳು ತಿಳಿಸಿವೆ. 

ಪಾಸ್ ಪೋರ್ಟ್ ಪಡೆಯಲು ಸಹೋದರಿಯರಿಬ್ಬರೂ ಎಲ್ಲಾ ರೀತಿಯ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ, ದಾಖಲೆಗಳನ್ನು ಪರಿಶೀಲಿಸುವುದಕ್ಕೂ ಮುನ್ನವೇ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದಾರೆಂದು ತಿಳಿದುಬಂದಿದೆ. 

ಇದೀಗ ಸಹೋದರಿಯರು ಹರಿಯಾಣ ಮುಖ್ಯಮಂತ್ರಿ ಅನಿಲ್ ವಿಜ್ ಅವರ ನಿವಾಸಕ್ಕೆ ತೆರಳಿದ್ದು, ಘಟನೆಯನ್ನು ವಿವರಿಸಿದ್ದಾರೆ. ದೂರು ಆಲಿಸಿರುವ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. 

 ದಾಖಲೆ ಪರಿಶೀಲಿಸದೆಯೇ ಪಾಸ್ ಪೋರ್ಟ್ ನಿರಾಕರಿಸಿದ ಅಧಿಕಾರಿಗಳನ್ನು ಹೆಚ್ಚುವರಿ ಆಯುಕ್ತ ಅಸೋಕ್ ಶರ್ಮಾ ಅವರು ತರಾಟೆಗೆ ತೆಗೆದುಕೊಂಡಿದ್ದು, ಪಾಸ್ ಪೋರ್ಟ್ ನೀಡಲು ಸಿದ್ಧತೆಗಳನ್ನು ನಡೆಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com